Advertisement

ಕೃಷ್ಣೆಯ ಪ್ರವಾಹಕ್ಕೆ ನಲುಗಿದ ರೈತರೇ ಕಟ್ಟಿದ ಬ್ಯಾರೇಜ್

11:37 AM Aug 20, 2019 | sudhir |

ಜಮಖಂಡಿ: ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳಿಗೆ ಪ್ರಮುಖ ಸಂಪರ್ಕ ಸೇತುವೆಯಾಗಿದ್ದ, ಅಂದಾಜು 70 ವರ್ಷಗಳ ಇತಿಹಾಸ ಹೊಂದಿರುವ ಚಿಕ್ಕಪಡಸಲಗಿ ಸೇತುವೆ, ಕೃಷ್ಣಾನದಿ ಭೀಕರ ಪ್ರವಾಹಕ್ಕೆ ರವಿವಾರ ಶಿಥಿಲಗೊಂಡಿದೆ.

Advertisement

ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಿದ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಸಂಪರ್ಕ ಸೇತುವೆ ಇಂದು ಕೃಷ್ಣಾರ್ಪಣೆಯಾಗಿದೆ. ಜನತೆಗೆ ಅನಕೂಲಕ್ಕಾಗಿ ನಿರ್ಮಾಣಗೊಂಡಿದ್ದ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಳೆದ 15 ದಿನದಳಿಂದ ನಿರಂತರವಾಗಿ ಉಕ್ಕೇರಿ ಹರಿಯುತ್ತಿರುವ ಕೃಷ್ಣಾನದಿ ಪ್ರವಾಹಕ್ಕೆ ಸಿಲುಕಿ ಸೇತುವೆ ಎರಡು ಬದಿಯಲ್ಲಿ ನಿರ್ಮಿಸಿದ್ದ 22 ಅಪಘಾತ ತಡೆ ಕಂಬಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿಹೋಗಿವೆ.

ಆಲಮಟ್ಟಿ ಜಲಾಶಯದಲ್ಲಿ ಮೊದಲನೇ ಹಂತದ 519ಮೀ. ನೀರು ಹಿಡಿದಿಟ್ಟರೂ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮುಳುಗುವುದಿಲ್ಲ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ನೀರಿನ ರಭಸಕ್ಕೆ ಸೇತುವೆ ಅಕ್ಕ-ಪಕ್ಕದ ತಡೆಗೋಡೆ ಕೊಚ್ಚಿಹೋಗಿದೆ.

ಈ ಸೇತುವೆಯಲ್ಲಿ 22 ಕಮಾನುಗಳಿದ್ದು, 4ಮೀಟರ್ ಎತ್ತರವಿದೆ. ಕಮಾನುಗಳ ಅಂತರ 18 ಮೀಟರ್ ಇದೆ. 413 ಮೀಟರ್‌ನಷ್ಟು ಉದ್ದವಿರುವ ಇದು, ನೆಲಭಾಗದಿಂದ 11 ಮೀಟರ ಎತ್ತರವಿದೆ. ಮಹಾರಾಷ್ಟ್ರಕ್ಕೆ ಸಂಪರ್ಕಕ್ಕಾಗಿ ಈ ಸೇತುವೆ ಬ್ರಿಟಿಷರು ನಿರ್ಮಾಣ ಮಾಡಿದ್ದರು.

ಚಿಕ್ಕಪಡಸಲಗಿ ಸೇತುವೆಯ ಮಧ್ಯಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಾಲೂಕಾಡಳಿತಕ್ಕೆ ಬಂದಿದ್ದು, ಮುಂಜಾಗೃತೆ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಹೆಚ್ಚಿಗೆ ಮಾಡಲಾಗಿದೆ. ತಾಲೂಕಿನ ಜನರು ಚಿಕ್ಕಪಡಸಲಗಿ ಸೇತುವೆ ಮುಗುಚಿ ಬಿದ್ದಿದೆ ಎಂದು ಭಯ ಭೀತರಾಗಿದ್ದಾರೆ. ತಾಲೂಕಿನ ಚಿಕ್ಕಪಡಸಲಗಿ ಸೇತುವೆ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಅವಲಂಭಿಸಿದೆ. ಸೇತುವೆ ಮೇಲೆ ಪ್ರತಿನಿತ್ಯ ದಿನದ 24 ಗಂಟೆಯಲ್ಲಿ 8 ಸಾವಿರ ಟ್ರಕ್, 750ಕ್ಕೂ ಹೆಚ್ಚು ಸರಕಾರಿ ಸಾರಿಗೆ ಬಸ್‌ಗಳು, 10 ಸಾವಿರಕ್ಕೂ ಹೆಚ್ಚು ಖಾಸಗಿ ವಾಹನಗಳು, 6 ಸಾವಿರಕ್ಕೂ ಹೆಚ್ಚು ದ್ವಿಚಕ್ರವಾಹನಗಳ ಓಡಾಡುವ ರಸ್ತೆ ಸಂಪೂರ್ಣ ಶಾಶ್ವತವಾಗಿ ಸ್ಥಗಿತಗೊಂಡಂತಾಗಿದೆ. ಕೃಷ್ಣಾನದಿ ತೀರದ ಮಹಾರಾಷ್ಟ್ರ ಮತ್ತು ಕರ್ನಾಟಕ ಜಿಲ್ಲೆಗಳಲ್ಲಿ ಸಂಪೂರ್ಣ ಮಳೆ ಕಡಿಮೆ ಆದರೂ ರವಿವಾರ ಕೂಡ ಕೃಷ್ಣಾನದಿಗೆ 3 ಲಕ್ಷಕ್ಕೂ ಹೆಚ್ಚು ಕ್ಯೂಸೆಸ್ ನೀರು ಹರಿದು ಬರುತ್ತಿದೆ.

Advertisement

ಮಾಜಿ ಸಚಿವ ದಿ.ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ರೈತರೇ ಕಟ್ಟಿದ ಬ್ಯಾರೇಜ್ ಕೂಡ ಇದೇ ಸ್ಥಳದಲ್ಲಿದ್ದು, ಕೃಷ್ಣೆಯ ಪ್ರವಾಹಕ್ಕೆ ಸಂಪೂರ್ಣ ಮುಳುಗಿದೆ.

Advertisement

Udayavani is now on Telegram. Click here to join our channel and stay updated with the latest news.

Next