Advertisement
ಕರಾವಳಿಯಲ್ಲಿ ಗುರುವಾರ ಉತ್ತಮ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಂಗಳೂರು ನಗರದಲ್ಲಿ ಮುಂಜಾನೆಯಿಂದ ಮಧ್ಯಾಹ್ನವರೆಗೆ ಮಳೆಯಾಗಿದೆ. ನಗರದ ಕೆಲವು ಕಡೆ ರಸ್ತೆಗಳಲ್ಲಿ ನೀರು ನಿಂತಿತ್ತು. ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ನೆಲ್ಯಾಡಿ, ಮಡಂತ್ಯಾರು, ಬಂಟ್ವಾಳ, ಸರಪಾಡಿ, ಉಪ್ಪಿನಂಗಡಿ, ಪುತ್ತೂರು, ಕನ್ಯಾನ ಸಹಿತ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ.
ಪುತ್ತೂರು: ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು ಗುರುವಾರ ಪುತ್ತೂರು ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಬೆಳಗ್ಗೆ, ಮಧ್ಯಾಹ್ನದ ವೇಳೆಗೆ ತಾಲೂಕಿನ ವಿವಿಧ ಮಳೆ ಸುರಿದಿದೆ. ಕೆಲವೆಡೆ ಅಡಿಕೆ ಒಣಗಲು ಹಾಕಿದವರಿಗೆ ಸಮಸ್ಯೆ ಉಂಟಾಗಿದೆ.
Related Articles
ಬಂಟ್ವಾಳ: ತಾಲೂಕಿನಾದ್ಯಂತ ಗುರುವಾರವೂ ಮಳೆ ಮುಂದುವರಿ ದಿದ್ದು, ಮುಂಜಾನೆ ಯಿಂದ ಮಧ್ಯಾಹ್ನದವರೆಗೂ ಸುರಿದಿದೆ. ಜ. 3ರಂದು ಬೆಳಗ್ಗೆ ಬಂದ ಮಳೆ 10 ಗಂಟೆಯ ಬಳಿಕ ಕಡಿಮೆಯಾದರೆ ಗುರುವಾರ ಮಧ್ಯಾಹ್ನದವರೆಗೂ ಹನಿ ಕಡಿಯದೆ ಸುರಿದಿತ್ತು. 2 ದಿನಗಳ ಕಾಲ ಮಳೆಯಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿಯಾಗಿದೆ.
Advertisement
ತಗ್ಗಿದ ಸೆಕೆ ಬಿರುಸಿನ ಮಳೆಯ ಪರಿಣಾಮ ಜಿಲ್ಲೆಯಲ್ಲಿ ಸೆಕೆ ಕಡಿಮೆಯಾಗಿದ್ದು, ತುಸು ಚಳಿಯ ವಾತಾವರಣ ಇತ್ತು. ಗರಿಷ್ಠ ಉಷ್ಣಾಂಶ 26 ಡಿ.ಸೆ.ಗೆ ಇಳಿಕೆಗೊಂಡಿತ್ತು. 7 ಡಿ.ಸೆ. ವಾಡಿಕೆಗಿಂತ ಕಡಿಮೆ ಇತ್ತು. 23.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚು ಇತ್ತು. ಹವಾಮಾನ ಇಲಾಖೆ ಅಧಿಕಾರಿ ಗಳ ಪ್ರಕಾರ ಹಿಂಗಾರು ಮುಗಿದಿದೆ. ಚಳಿಗಾಲ ಆರಂಭವಾದರೂ ಇನ್ನೂ ಕೆಲವು ಕಡೆ ಮಳೆ ಮುಂದುವರೆ ಯಲಿದೆ. ವಾಯುಭಾರ ಕುಸಿತದ ಪರಿಣಾಮ ಕರಾವಳಿ ಭಾಗದಲ್ಲಿ ಮಳೆಯಾಗಿದೆ. ವಾಯುಭಾರ ಕುಸಿತ ದಿಂದಾಗಿ ಪೂರ್ವಕ್ಕೆ ಮೋಡ ಚಲನೆ ಯಾಗುತ್ತಿದೆ. ಇದು ಮಳೆಗೆ ಕಾರಣ. ಸಿಡಿಲು ಬಡಿದು ಹಾನಿ
ಉಳ್ಳಾಲದ ಬಂಡಿಕೊಟ್ಯದ ನೇಲ್ಯದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳಿಗೆ ಹಾನಿ ಉಂಟಾಗಿದೆ. ಇಲ್ಲಿನ ಪ್ರವೀಣ್ ಗುರಿಕಾರ ಅವರ ಮನೆಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇಂದು “ಎಲ್ಲೋ ಅಲರ್ಟ್’
ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಜ. 5ರಂದು “ಎಲ್ಲೋ ಅಲರ್ಟ್’ ಘೋಷಿಸಿದೆ. ಈ ವೇಳೆ ಜಿಲ್ಲೆಯಾದ್ಯಂತ ಭಾರೀ ಮಳೆ, ಗುಡುಗು ಇರುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯೂ ಇದೆ. ಬೆಳ್ತಂಗಡಿ: 2ನೇ ದಿನವೂ ಮಳೆ
ಬೆಳ್ತಂಗಡಿ: ಎರಡು ದಿನಗಳಿಂದ ವಾತಾವರಣ ದೊಂದಿಗೆ ಸಣ್ಣಗೆ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೆ ರಸ್ತೆ ಸಹಿತ ಕೃಷಿ ಚಟುವಟಿಕೆಗೆ ತೊಡಕಾಗಿದೆ.
ಬುಧವಾರ ಮುಂಜಾನೆ ಸುರಿದ ಮಳೆ ಕೊಂಚ ಸಮಯ ಸುರಿದಿತ್ತು. ಮಧ್ಯಾಹ್ನದ ಬಳಿಕ ಸುಧಾರಣೆ ಕಂಡ ಮಳೆ ಗುರುವಾರ ಮತ್ತೆ ಸುರಿದಿದೆ. ಮಂಜು ಮುಸುಕಿದ ವಾತಾವರಣವೂ ಇತ್ತು. ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆ¨ªಾರಿಕರಣದ ಅಭಿವೃದ್ಧಿ ಕಾಮಗಾರಿ ಆಗುತ್ತಿರುವ ಕಡೆ ಕೆಸರುಮಯವಾಗಿ ಪರಿಣಮಿಸಿತು. ವಾಹನಗಳು ನಿಯಂತ್ರಣಕ್ಕೆ ಸಿಗದೆ ರಸ್ತೆ ತಡೆ ಉಂಟಾಯಿತು. ಮಧ್ಯಾಹ್ನ ಬಳಿಕ ಮತ್ತೆ ಬಿಸಿಲಿನ ವಾತಾವರಣ ಕಂಡುಬಂದಿದೆ. ಸುಳ್ಯ, ಸುಬ್ರಹ್ಮಣ್ಯ: ದಿನವಿಡೀ ಮಳೆ
ಸುಳ್ಯ/ಸುಬ್ರಹ್ಮಣ್ಯ: ಸುಳ್ಯ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ಬಹುತೇಕ ಸಮಯ ನಿರಂತರ ಸಾಧಾರಣ ಮಳೆಯಾಗಿದೆ.
ಪೇಟೆ ಮತ್ತಿತರ ಕಡೆಗಳಿಗೆ ಕೊಡೆ, ರೈನ್ ಕೋಟ್ ಇಲ್ಲದೇ ಬಂದಿದ್ದ ಜನರು ಮಳೆಯಲ್ಲಿ ನೆನೆಯಬೇಕಾಯಿತು. ಗ್ರಾಮೀಣ ಭಾಗದಲ್ಲಿ ಒಣಗಲು ಹಾಕಿದ್ದ ಅಡಿಕೆಗಳನ್ನು ಟಾರ್ಪಾಲು ಹಾಕಿ ಮಳೆಯಿಂದ ರಕ್ಷಿಸುವ ಯತ್ನ ಮಾಡಲಾಯಿತು. ಸುಳ್ಯ ನಗರ, ಕಡಬ, ಸುಬ್ರಹ್ಮಣ್ಯ, ಮಂಡೆಕೋಲು, ಜಾಲೂÕರು, ಅರಂತೋಡು, ಸಂಪಾಜೆ, ಬೆಳ್ಳಾರೆ, ಪಂಜ, ಗುತ್ತಿಗಾರು, ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಬಿಳಿನೆಲೆ, ಬಳ್ಪ, ಎಡಮಂಗಲ, ನಿಂತಿಕಲ್ಲು, ಕಲ್ಮಕಾರು, ಪಂಜ, ಬೆಳ್ಳಾರೆ ಪರಿಸರ ದಲ್ಲಿಯೂ ಸಾಧಾರಣ ಮಳೆಯಾಗಿತ್ತು. ಕೊಡಗಿನಲ್ಲಿ ಮಳೆ: ಕಾಫಿ, ಭತ್ತ ಕೃಷಿಕರಲ್ಲಿ ಆತಂಕ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಬಹುತೇಕ ಕಡೆ ಸಾಧಾರಣ ಮಳೆ ನಿರಂತರವಾಗಿ ಸುರಿಯುತ್ತಿದೆ. ಕಾಫಿ ಮತ್ತು ಭತ್ತದ ಕೃಷಿಕರು ಬೆಳೆ ಹಾನಿಯ ಆತಂಕ ಎದುರಿಸುತ್ತಿದ್ದಾರೆ. ಮಡಿಕೇರಿ, ವೀರಾಜಪೇಟೆ, ಸೋಮ ವಾರಪೇಟೆ, ಕುಶಾಲನಗರ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯ ಹಲವೆಡೆ ಮಳೆಯಾಗಿದೆ. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದಲ್ಲಿ ಮಳೆ, ಮೈಕೊರೆಯುವ ಚಳಿ ಮತ್ತು ಮಂಜು ಮುಸುಕಿದ ವಾತಾವರಣವಿದೆ. ಜಿಲ್ಲೆಯಲ್ಲಿ ಕಾಫಿ ಫಸಲು ಹಣ್ಣಾಗಿದ್ದು, ಬಹುತೇಕ ಕಡೆಗಳಲ್ಲಿ ಕೊಯಿಲು ಆರಂಭಗೊಂಡಿದೆ. ಮಳೆ, ಮೋಡದ ವಾತಾವರಣದಿಂದ ಕಾಫಿಯ ಗುಣಮಟ್ಟ ಕುಸಿಯುವ ಭೀತಿ ಎದುರಾಗಿದೆ. ಕೊçಲು ಮಾಡದೆ ಇರುವ ಕಾಫಿ ಕೊಳೆತು ಉದುರಲಿವೆ. ಮಾತ್ರವಲ್ಲದೆ ಈಗಾಗಲೇ ಕೊಯಿಲು ಮಾಡಿರುವ ಕಾಫಿಯನ್ನು ಒಣಗಿಸು ವುದೇ ಸವಾಲಾಗಿ ಪರಿಣಮಿಸಿದೆ. ಭತ್ತದ ಫಸಲು ಕೂಡ ಕಟಾವಿಗೆ ಬಂದಿದ್ದು, ಬೆಳೆ ನಷ್ಟವಾಗುವ ಆತಂಕ ರೈತರಲ್ಲಿದೆ. ಕಟಾವು ಮಾಡಲಾಗಿರುವ ಭತ್ತದ ಫಸಲನ್ನು ಗದ್ದೆಯಲ್ಲೇ ಒಣಗಲು ಬಿಡಲಾಗಿದ್ದು, ಮಳೆ ನೀರು ಮತ್ತು ಮಂಜಿನಿಂದಾಗಿ ಹಾನಿಯಾಗುವ ಸಂಭವ ಇದೆ.