ಮುಂಬಯಿ: ಬಾಕೂìರು ಶ್ರೀ ಮಹಾಸಂಸ್ಥಾನ ಭಾರ್ಗವ ಬೀಡು ಉಡುಪಿ ಇಲ್ಲಿ ಪೂಜ್ಯ ವಿದ್ಯಾವಾಚಸ್ಪತಿ ಡಾ| ಶ್ರೀ ವಿಶ್ವಸಂತೋಷ ಭಾರತಿ ಶ್ರೀಪಾದರ ನೇತೃತ್ವದಲ್ಲಿ ಎ. 19 ರಂದು ಶ್ರೀ ನಾಗದೇವರ ಮತ್ತು 250 ಕ್ಕೂ ಅಧಿಕ ದೈವಗಳ ಪುನ:ಪ್ರತಿಷ್ಠಾಪನೆ ಹಾಗೂ ಶ್ರೀ ನಾಗಮಂಡಲೋತ್ಸವವು ಜರಗಲಿದ್ದು, ಪೂರ್ವಭಾವಿಯಾಗಿ ಪತ್ರಿಕಾಗೋಷ್ಠಿಯು ಮಾ. 26 ರಂದು ಮಂಗಳೂರಿನಲ್ಲಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಪರಮಪೂಜ್ಯ ಶ್ರೀ ಡಾ| ವಿಶ್ವಸಂತೋಷ ಭಾರತಿ ಶ್ರೀಪಾದರು, ತುಳುನಾಡಿನ ಪ್ರಾಚೀನ ಪದ್ಧತಿ ಪರಂಪರೆಯಲ್ಲಿ ಪಾಡಾªನ ಮತ್ತು ನುಡಿ, ಮಂತ್ರಗಳ ಸಹಿತ 100, 200 ವರ್ಷಗಳ ಪುರಾತನ ಶೈಲಿಯಲ್ಲಿ ದೈವ ಪ್ರತಿಷ್ಠೆಯನ್ನು ಅಪರೂಪದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಸಲಾಗುವುದು. ಅಲ್ಲದೆ ಯಾವುದೇ ದುಂದುವೆಚ್ಚ ಆಡಂಬರವಿಲ್ಲದೆ ಮಹಾ ನಾಗಮಂಡೋತ್ಸವವನ್ನು ಮಾಡಲಾಗುವುದು. ಇದು ಸಮಾಜಕ್ಕೊಂದು ಪ್ರೇರಣೆಯಾಗಬೇಕು. ಇದರ ಪೂರ್ವಭಾವಿಯಾಗಿ ನಾಗರಥವು ಬಾಕೂìರಿನಿಂದ ಕಾಸರಗೋಡಿನವರೆಗೆ ಪ್ರತಿಯೊಂದು ಹಳ್ಳಿಗಳಿಗೂ ಸಂಚರಿಸಿ ಜನರಿಗೆ ಕಾರ್ಯಕ್ರಮದ ಬಗ್ಗೆ ತಿಳಿಸಿ ಅವರನ್ನು ಆಹ್ವಾನಿಸಲಾಗುವುದು. ಎಪ್ರಿಲ್ 19 ರಂದು ಹೊರೆಕಾಣಿಕೆ ಬರಲಿದ್ದು, ಇದರಲ್ಲಿ ವಿವಿಧ ಕಡೆಗಳಿಂದ ನಿರೀಕ್ಷೆಗೂ ಮೀರಿ ಹೊರೆಕಾಣಿಕೆ ಬರಲಿದೆ. ಸಂಸ್ಥಾನದ ಎರಡು ಕಣ್ಣುಗಳಂತಿರುವ ಎರಡು ಯೋಜನೆಗಳನ್ನು ಅನಾವರಣಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ಮಹಾನ್ ಸಾಧನೆಗೈದ ಕೆಲವು ಮಹಾನೀಯರಿಗೆ ಭೂತಾಳಪಾಂಡ್ಯ ಪ್ರಶಸ್ತಿಯನ್ನು ನೀಡಲಾಗುವುದು. ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರುಗಳು, ವಿವಿಧ ಕ್ಷೇತ್ರಗಳ ಮಹಾನ್ ಸಾಧಕರು ಆಗಮಿಸಲಿದ್ದಾರೆ. ಸಮಾಜ ಬಾಂಧವರು ಈ ಸಂಭ್ರಮದಲ್ಲಿ ಪಾಲುದಾರರಾಗಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಉಸ್ತುವಾರಿ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಬಳ್ಳಾರಿ, ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಗೌರವಾಧ್ಯಕ್ಷ ಸಿಎ ಶಂಕರ್ ಶೆಟ್ಟಿ, ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ಗೌರವಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮಹಾಪೋಷಕ ಬಾಕೂìರು ಸುಧಾಕರ ಶೆಟ್ಟಿ, ಆರ್ಥಿಕ ಸಮಿತಿಯ ಕೆ. ಎಂ. ಶೆಟ್ಟಿ ಮುಂಬಯಿ, ನಾಗರಥ ಯಾತ್ರಾ ಸಮಿತಿಯ ಪದಾಧಿಕಾರಿಗಳಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಸುರೇಶ್‌ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಆನಂತರ ನಡೆದ ಸಮಾಲೋಚನಾ ಸಭೆಯಲ್ಲಿ ಬಂಟರ ಸಂಘ ಮುಂಬಯಿ ಗೌರವ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಮುಂಬಯಿ ಉದ್ಯಮಿಗಳಾದ ಭಾಸ್ಕರ್ ಶೆಟ್ಟಿ, ಉದಯ ಎನ್. ಶೆಟ್ಟಿ, ಸಿಎ ಸತೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಮುಲುಂಡ್ ಬಂಟ್ಸ್‌ನಅಧ್ಯಕ್ಷ ಎಸ್. ಬಿ. ಶೆಟ್ಟಿ, ಸದಾಶಿವ ಶೆಟ್ಟಿ, ಪಿ. ಎನ್. ಶೆಟ್ಟಿ, ಡಿ. ಎನ್. ಶೆಟ್ಟಿ, ಹರೀಶ್ ಶೆಟ್ಟಿ, ಎಚ್. ಪ್ರಕಾಶ್ಚಂದ್ರ ಶೆಟ್ಟಿ, ಜಯರಾಮ ರೈ, ಲಕ್ಷ್ಮೀನಾರಾಯಣ ರೈ ಹರೇಕಳ, ಭಾಸ್ಕರ್ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ