Advertisement
ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (34) ಮೃತಪಟ್ಟವರು. ಅವರು ಮಂಗಳವಾರ ಬೆಳಗ್ಗೆ ಮೀನು ಹಿಡಿಯಲೆಂದು ಸಮೀಪದ ನಾಗರಮಠದ ಸೀತಾ ನದಿಗೆ ಹೋಗಿದ್ದು ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದರು. ಅವರಿಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಸ್ಥಳೀಯರೊಬ್ಬರು ರಕ್ಷಿಸಲು ಬಂದರೂ ನೀರಿನ ಸೆಳೆತ ಜೋರಾಗಿದ್ದರಿಂದ ಯುವಕರು ನೀರುಪಾಲಾದರು.
Related Articles
ಹುಣ್ಣಿಮೆಯ ಮಾರನೇ ದಿನವಾದ್ದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಯುವಕರು ಸ್ಥಳೀಯರೇ ಆಗಿದ್ದು, ಪರಿಚಯದ ಜಾಗವಾದರೂ ಆಳ ಅರಿಯದೆ ಮುಳುಗಿದರು ಎನ್ನಲಾಗಿದೆ.
Advertisement
ಶ್ರಮ ಜೀವಿಗಳುಯುವಕರಿಬ್ಬರೂ ಶ್ರಮಜೀವಿಗಳಾಗಿದ್ದರು. ಪ್ರಶಾಂತ ತೆಂಗಿನಕಾಯಿ, ಎಳನೀರು ತೆಗೆಯುವ ಕಾರ್ಯ ಮಾಡುತ್ತಿದ್ದರೆ, ಶ್ರೀಶ ಐಟಿಐ ಮುಗಿಸಿ ಉದ್ಯೋಗ ಅರಸುತ್ತಿದ್ದು ನಡುವೆ ಗಾರೆ, ಬೋಟ್ ಕೆಲಸಕ್ಕೆ ತೆರಳುತ್ತಿದ್ದರು. ಇಬ್ಬರೂ ಬಿಡುವಿನ ವೇಳೆಯಲ್ಲಿ ಮೀನು ಹಿಡಿಯುವ ಕಾರ್ಯದಲ್ಲಿ ತೊಡಗುತ್ತಿದ್ದರು. ಪ್ರಶಾಂತ ಅವರು ತಾಯಿ, ಇಬ್ಬರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಶ್ರೀಶ ಅವರು ತಂದೆ, ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.