ಕೋಟ: ಶ್ರೀವೇಣುಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ ರಿ. ಮೂಡುಕೇರಿ-ಬಾರ್ಕೂರು ಆಶ್ರಯದಲ್ಲಿ, ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಪ್ರೇರಣ-2021 ರವಿವಾರ ಬಾರ್ಕೂರು ವೇಣುಗೋಪಾಲಕೃಷ್ಣ ದೇಗುಲದ ವೆಂಕಟೇಶ್ವರ ಸಭಾಂಗಣದಲ್ಲಿ ಜರುಗಿತು.
ಎಜ್ಯುಕೇಶನಲ್ ಸೊಸೈಟಿ ಸ್ಥಾಪಕಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಮಾಜಿ ಅಧ್ಯಕ್ಷ ಕೆ. ಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಾಣಿಗ ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತಿಯನ್ನು ಪಡೆಯಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಈ ಸಂಸ್ಥೆ ಸ್ಥಾಪಿಸಲಾಗಿತ್ತು. ಇದೀಗ ನಮ್ಮ ಕನಸಿನ ಕೂಸು ಹೆಮ್ಮರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾಗಿದೆ ಎಂದರು.
ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ರಾಜೇಂದ್ರಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಮಾರ್ಗದರ್ಶನ ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ನೆರವಾಗಲು ಸಾಧ್ಯವಾಗಿದೆ. ಶಿಕ್ಷಣಕ್ಕೆ ನೀಡಿದ ಸಹಾಯ ದೇವರ ಕೆಲಸದಷ್ಟೇ ಶ್ರೇಷ್ಠವಾದದ್ದು ಎಂದರು.
ಈ ಸಂದರ್ಭ ಪಿಯುಸಿಯಲ್ಲಿ ಸಂಪೂರ್ಣ 600ಅಂಕ ಪಡೆದ ಮಯೂರಿ ಬ್ರಹ್ಮಾವರ, ಸಿಂಚನಾ ತಗ್ಗರ್ಸೆ, ಕೆ.ಕಾರ್ತಿಕ್ ಕಡೂರು ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಮತ್ತು ಸಹಕಾರ ಸ್ಮರಣೆ ನೆರವೇರಿತು. ಸಂಪರ್ಕಸುಧಾ ಪತ್ರಿಕೆ 2020ರಲ್ಲಿ ಆಯೋಜಿಸಿದ ಮುದ್ದು ಕಂದ ಸ್ಪರ್ಧೆ ಬಹುಮಾನ ವಿತರಣೆ ನೆರವೇರಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ, ಮುಂಬೈ ಗಾಣಿಗ ಸಮಾಜದ ಅಧ್ಯಕ್ಷ ಬಿ.ವಿ.ರಾವ್, ಮಾಜಿ ಅಧ್ಯಕ್ಷ ಜಗನ್ನಾಥ ಗಾಣಿಗ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್ ಮಾಲ್ತಾರು, ವಕೀಲ ಬಾಲಚಂದ್ರ ಗಾಣಿಗ, ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರತ್ನಾಕರ ಗಾಣಿಗ, ದೈ.ಶಿ. ಪರಿವೀಕ್ಷಣಾಽಕಾರಿ ಪದ್ಮಾವತಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಗುತ್ತಿಗೆದಾರ ಶೇವಧಿ ಸುರೇಶ್ ಗಾಣಿಗ, ಸಂಪರ್ಕಸುಧಾ ಪತ್ರಿಕೆ ಅಧ್ಯಕ್ಷ ಎಸ್.ಕೆ. ಪ್ರಾಣೇಶ್, ಕಾರ್ಯದರ್ಶಿ ಕೆ.ಉದಯ್, ವೇಣುಗೋಪಾಲಕೃಷ್ಣ ಸೌಹಾರ್ದ ಸಹಕಾರಿ ಸಿ.ಇ.ಒ. ಪರಮೇಶ್ವರ್ ಹಾಗೂ ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಜಿ. ಚೆಲ್ಲೆಮಕ್ಕಿ, ಜಂಟಿ ಕಾರ್ಯದರ್ಶಿ ನಾರಾಯಣ ಎಚ್. ಐರೋಡಿ ಉಪಸ್ಥಿತರಿದ್ದರು.
ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಗಣೇಶ್ ಜಿ. ಚೆಲ್ಲೆಮಕ್ಕಿ ಸ್ವಾಗತಿಸಿ, ಗೋಪಾಲಕೃಷ್ಣ ಕುಂಭಾಶಿ, ಯೋಗೀಶ್ ಕೊಳಲಗಿರಿ, ರಘುರಾಮ್ ಬಕಾಡಿ ಕಾರ್ಯಕ್ರಮ ನಿರೂಪಿಸಿ. ಗೋಪಾಲಕೃಷ್ಣ ಎಂ.ಐ.ಟಿ., ಅತಿಥಿಗಳನ್ನು ಪರಿಚಯಿಸಿ, ಖಜಾಂಚಿ ಸೂರ್ಯನಾರಾಯಣ ಗಾಣಿಗ ಮಟಪಾಡಿ ವಂದಿಸಿದರು.