Advertisement

ರಾಹುಲ್‌ ಮೆಂಟಲೀ ಅನ್‌ಫಿಟ್‌ ಎಂದಿದ್ದ ಬರ್ಖಾ ಬಿಜೆಪಿಗೆ ಸೇರ್ಪಡೆ

03:51 PM Apr 22, 2017 | udayavani editorial |

ಹೊಸದಿಲ್ಲಿ : ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಕಾಂಗ್ರೆಸ್‌ ಪಕ್ಷದಿಂದ ಆರು ವರ್ಷಗಳಿಗೆ ಉಚ್ಚಾಟಿಸಲ್ಪಟ್ಟಿದ್ದ ದಿಲ್ಲಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಬರ್ಖಾ ಶುಕ್ಲಾ ಸಿಂಗ್‌ ಅವರು ಇಂದು ಶನಿವಾರ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. 

Advertisement

ಇಂದು ಶನಿವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಬರ್ಖಾ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ದಿಲ್ಲಿ ಪ್ರಭಾರ ಶ್ಯಾಮ್‌ ಜಾಜು ಅವರನ್ನು ಭೇಟಿಯಾದರು. 

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತು ದಿಲ್ಲಿ ಘಟಕದ ಅಧ್ಯಕ್ಷ ಅಜಯ್‌ ಮಾಕನ್‌ ಅವರ ನಾಯಕತ್ವವನ್ನು ಪ್ರಶ್ನಿಸಿದ್ದ ಬರ್ಖಾ ಅವರು ನಿನ್ನೆಯಷ್ಟೇ ಪಕ್ಷದಲ್ಲಿ ತಾನು ವಹಿಸಿಕೊಂಡಿದ್ದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. 

ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಲು ರಾಹುಲ್‌ ಗಾಂಧಿ ಮೆಂಟಲೀ ಅನ್‌ಫಿಟ್‌ ಎಂದು ಬರ್ಖಾ ನೇರ ಆರೋಪ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next