Advertisement

ಬೆಳುವಾಯಿ: ವಿದ್ಯುತ್‌ ಸ್ಪರ್ಶ; ಯುವಕ ಸಾವು

01:56 AM Sep 13, 2019 | sudhir |

ಮೂಡುಬಿದಿರೆ: ಅಲ್ಯೂಮಿನಿಯಂ ಕೊಕ್ಕೆ ಬಳಸಿ ಅಡಿಕೆ ಕೀಳುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶವಾಗಿ ಯುವಕನೋರ್ವ ಮೃತಪಟ್ಟ ಘಟನೆ ಬೆಳುವಾಯಿಯಲ್ಲಿ ಗುರುವಾರ ಸಂಭವಿಸಿದೆ.

Advertisement

ಬೆಳುವಾಯಿಯ ಷಣ್ಮುಖಾನಂದ ಹಾಲ್‌ ಸಮೀಪದ ಮಿತ್ತ ಆನೆಬೆಟ್ಟು ನಿವಾಸಿ ಗಂಗಾಧರ ಸಾಲ್ಯಾನ್‌ ಅವರ ಪುತ್ರ ಕೀರ್ತಿ ಸಾಲ್ಯಾನ್‌ (30) ಮೃತಪಟ್ಟವರು.

ಅವರು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಡಿಕೆ ಕೀಳುತ್ತಿದ್ದಾಗ ಘಟನೆ ಸಂಭವಿಸಿದೆ. ವಿದ್ಯುತ್‌ ಆಘಾತಕ್ಕೀಡಾದ ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆಯೇ ಮೃತಪಟ್ಟರು ಎಂದು ತಿಳಿದು ಬಂದಿದೆ.

ಗಂಗಾಧರ ಸಾಲ್ಯಾನ್‌ ಅವರ ಏಕೈಕ ಪುತ್ರನಾಗಿದ್ದ ಕೀರ್ತಿ ಸುಮಾರು 8 ವರ್ಷ ವಿದೇಶದಲ್ಲಿದ್ದು, 3 ವರ್ಷಗಳಿಂದ ಊರಲ್ಲಿ ನೆಲೆಸಿ ಕೃಷಿ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next