Advertisement

ಬಾರ್ಸಿಲೋನಾ ಮಾಸ್ಟರ್ ಬ್ಯಾಡ್ಮಿಂಟನ್‌: ಸೈನಾ ಮುನ್ನಡೆ, ಪ್ರಣಯ್‌ ಪರಾಭವ

09:59 AM Feb 21, 2020 | Team Udayavani |

ಬಾರ್ಸಿಲೋನಾ: ಬಾರ್ಸಿಲೋನಾ ಮಾಸ್ಟರ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಬುಧವಾರ ಭಾರತ ಮಿಶ್ರಫ‌ಲ ಅನುಭವಿಸಿದೆ. ಸೈನಾ ನೆಹ್ವಾಲ್‌ ದ್ವಿತೀಯ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾದರೆ, ಎಚ್‌.ಎಸ್‌. ಪ್ರಣಯ್‌ ಮೊದಲ ಸುತ್ತಿನಲ್ಲೇ ಎಡವಿದ್ದಾರೆ. ಮಿಕ್ಸೆಡ್‌ ಡಬಲ್ಸ್‌ನಲ್ಲಿ ಗೆಲುವು ಒಲಿದಿದೆ.

Advertisement

ಸೈನಾ ನೆಹ್ವಾಲ್‌ 35 ನಿಮಿಷಗಳ ಹೋರಾಟದ ಬಳಿಕ ಜರ್ಮನಿಯ ಯೋನ್‌ ಲೀ ಅವರನ್ನು 21-16, 21-14 ಅಂತರದಿಂದ ಪರಾಭವಗೊಳಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಮಲೇಶ್ಯದ ಡ್ಯಾರೆನ್‌ ಲ್ಯೂ ಕೈಯಲ್ಲಿ 18-21, 15-21 ಅಂತರದ ಸೋಲನುಭವಿಸಿದರು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ-ಎನ್‌. ಸಿಕ್ಕಿ ರೆಡ್ಡಿ 10-21, 21-16, 21-17 ಅಂತರದಿಂದ ಡೆನ್ಮಾರ್ಕ್‌ ನ ಮಥಿಯಾಸ್‌ ಕ್ರಿಸ್ಟಿಯಾನ್ಸೆನ್‌-ಅಲೆಕ್ಸಾಂಡ್ರಾ ಬೋಯೆ ಅವರನ್ನು ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next