Advertisement

ಕ್ಷೌರಿಕ ವೃತ್ತಿಯಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಸವಿತಾ ಸಮಾಜ

04:36 PM Sep 16, 2020 | Suhan S |

ಚಿಕ್ಕಬಳ್ಳಾಪುರ: ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಸವಿತಾ ಸಮಾಜದ ಬಂಧುಗಳು ವೃತ್ತಿ ಪಾವಿತ್ರ್ಯತೆ ಕಾಪಾಡಿ ಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳಿಂದ ಬರುವ ಸೌಲಭ್ಯಪಡೆದುಕೊಳ್ಳುವ ಜೊತೆಗೆ ಆರೋಗ್ಯವಂತ ಸಮಾಜ ವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆ ನೀಡಿ ಕೇವಲ ಕ್ಷೌರಿಕ ವೃತ್ತಿಮಾತ್ರವಲ್ಲದೆ ಕಲೆಯಲ್ಲಿ ಸಹ ವಿಶಿಷ್ಟ ಸ್ಥಾನಮಾನ ಹೊಂದಿದ್ದಾರೆ.

ದಿನಾಚರಣೆ ಗೊತ್ತಿಲ್ಲ: 1096ರಲ್ಲಿ ಫ್ರಾನ್ಸ್‌ನಲ್ಲಿ ಕ್ಷೌರಿಕವೃತ್ತಿಯಲ್ಲಿ ತೊಡಗಿದ್ದ ಸವಿತಾ ಸಮಾಜದವರು ಕ್ಷೌರಿಕರು ಕೇವಲ ಕ್ಷೌರಿಕರು ಮಾತ್ರವಲ್ಲ, ಸಣ್ಣ ಸಣ್ಣ ಶಸ್ತ್ರ ಚಿಕಿತ್ಸೆ, ಗಾಯಗಳನ್ನು ವಾಸಿಪಡಿಸಲು ಔಷಧಿ ನೀಡಿ ಹಲ್ಲುಗಳು ಕೀಳು ವಂತಹ ಕೆಲಸದಲ್ಲಿ ಸಹ ತೊಡಗಿಸಿ ಕೊಂಡಿದ್ದಾರೆ ಎಂದು ಸಂಘ ಸ್ಥಾಪಿಸಿದರು.ಅಂದಿನಿಂದ ಇದು ವರೆಗೆ ಸೆ.16ರಂದು ವಿಶ್ವ ಕ್ಷೌರಿಕರ ದಿನಾಚರಣೆ ಆಚರಿಸಲಾಗುತ್ತದೆ.

ಆದರೆ ಬಹುತೇಕ ಸವಿತಾ ಸಮಾಜದ ಬಂಧುಗಳಿಗೆ ತಮ್ಮ ದಿನಾ ಚರಣೆ ಕೂಡ ನೆನಪಿಲ್ಲ.ಮಂಗಳವಾರಹೊರತುಪಡಿಸಿ ಪ್ರತಿನಿತ್ಯ ಬೆಳಗಿನ ಜಾವ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.

ಬ್ಯೂಟಿಷಿಯನ್‌ ಮಾರ್ಗ: ಕೇವಲ ಸವಿತಾ ಸಮಾಜ ಮಾತ್ರವಲ್ಲದೆ ಇತರೆ ಸಮಾಜ ಮತ್ತು ಸಮುದಾಯಗಳ ಜನ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮತ್ತೂಂದೆಡೆ ಮಹಿಳೆಯರು ಸಹ ಬ್ಯೂಟಿಷಿಯನ್‌ ಕೇಂದ್ರಗಳನ್ನು ತೆರೆದು ಮಹಿಳೆಯರುಮತ್ತು ಮಕ್ಕಳಿಗೆ ಕೇಶ ವಿನ್ಯಾಸ- ಮೆಹಂದಿ ಹಾಕುವ ಮೂಲಕ ಹೊಸರೂಪ ನೀಡಿದ್ದಾರೆ. ಮಹಿಳೆಯರುಆರ್ಥಿವಾಗಿ ಅಭಿವೃದ್ಧಿ ಹೊಂದಲುಬ್ಯೂಟಿಷಿಯನ್‌ ಮಾರ್ಗ ಕಂಡುಕೊಂಡಿದ್ದಾರೆ.

Advertisement

ವೃತ್ತಿಯನ್ನು ಅವಹೇಳನೆ ಮಾಡು ವಂತಹ ಪದ ಬಳಸುವುದರಿಂದ ಕ್ಷೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಸವಿತಾ ಸಮಾಜದವರಿಗೆ ಮುಜುಗರ, ಅವಮಾನ ಮಾಡಿದಂತಾಗುತ್ತದೆ. ಅದಕ್ಕಾಗಿ ಸರ್ಕಾರ ಅಟ್ರಾಸಿಟಿ ಮಾದರಿಯಲ್ಲಿ ನಿಬಂಧಿತ ಪದವನ್ನು ಬಳಕೆ ಮಾಡುವವರನ್ನು ಕೇಸು ಹಾಕಿ ಕಾನೂನುಕ್ರಮ ಜರುಗಿಸಬೇಕೆಂಬ ಧ್ವನಿ ಎಲ್ಲೆಡೆಯಿಂದಕೇಳಿ ಬರುತ್ತಿದೆ.

ಅರಸು ಅಭಿವೃದ್ಧಿ ನಿಗಮದಿಂದ ಪ್ರತ್ಯೇಕವಾಗಿ ರಾಜ್ಯದಲ್ಲಿ ಸವಿತಾ ಸಮಾಜದ ನಿಗಮ ಸ್ಥಾಪನೆ ಯಾದ ಬಳಿಕ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 7 ಮಂದಿಗೆ ಸ್ವಯಂ ಉದ್ಯೋಗಕೈಗೊಳ್ಳಲು 50 ಸಾವಿರ ರೂ. ಸಾಲ ನೀಡಲುಕ್ರಮಕೈಗೊಂಡಿದ್ದೇವೆ. ಆರ್‌.ಬಸವರಾಜು, ಜಿಲ್ಲಾ ವ್ಯವಸ್ಥಾಪಕರು, ದಿ.ದೇವರಾಜ ಅರಸು ಅಭಿವೃದ್ಧಿ ನಿಗಮ

ಜಿಲ್ಲೆಯಲ್ಲಿ 12 ಸಾವಿರ ಸವಿತಾ ಸಮಾಜದ ಬಂಧುಗಳು ಕ್ಷೌರಿಕ ವೃತ್ತಿ ಮತ್ತು ನಾದಸ್ವರ, ಡೋಲುಮುಂತಾದಕಲೆಯಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ಸರ್ಕಾರಕೋವಿಡ್‌ ಸಂದರ್ಭದಲ್ಲಿ 5 ಸಾವಿರ ರೂ. ಪ್ರೋತ್ಸಾಹ ಧನ ಎಲ್ಲರಿಗೂ ಕಲ್ಪಿಸಬೇಕು. ಚಲಪತಿ, ಜಿಲ್ಲಾ ಸವಿತಾ ಸಮಾಜ ಮುಖಂಡ

 

Advertisement

Udayavani is now on Telegram. Click here to join our channel and stay updated with the latest news.

Next