Advertisement
ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮುಖಾಂತರ ಅಭಿವೃದ್ಧಿಗೊಂಡಿರುವ ಜಾರಂದಾಯ ಕೆರೆಯನ್ನು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಪ್ರಿಯಾ ಇನ್‌ಲಾÂಂಡ್ ಫಿಶರಿಸ್ ಮತ್ತು ಬೋಟ್ ಸ್ಫೋರ್ಟ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಚಾಲನೆ ನೀಡಲಾಗಿದೆ.
ಕೆರೆಯ ಅಭಿವೃದ್ಧಿಯೊಂದಿಗೆ ಪುಟ್ಟ ಮಕ್ಕಳಿಗೆ, ಮಹಿಳೆಯರಿಗಾಗಿ ಮನೋರಂಜನಾ ಪಾರ್ಕ್ ನಿರ್ಮಿಸುವುದು. ಪ್ರವಾಸಿಗರಿಗಾಗಿ ಪೆಡೆಲ್ ಬೋಟ್, ರೋಬೋಟ್ ಮೋಟಾರ್ ಬೋಟ್, ಉದ್ಯಾನವನ, ವಿಶ್ರಾಂತಿ ಕುರ್ಚಿಗಳು, ಕೆರೆಯ ಸುತ್ತಲೂ ಔಷಧಿ ಗಿಡಗಳನ್ನು ಬೆಳೆಸುವುದು ಸಿಹಿ ನೀರಿನ ವಿವಿಧ ಜಾತಿಯ ಮೀನು ಮರಿಗಳ ಸಾಕಾಣಿಕೆಯ ಉದೇªಶ ಹೊಂದಲಾಗಿದೆ.
Related Articles
ಕೆರೆಯ ಸುತ್ತಮುತ್ತಲಿನಲ್ಲಿ ಸ್ವತ್ಛತೆಯನ್ನು ಕಾಪಾಡುವುದು, ಕೆರೆಯ ದಂಡೆಯ ಉದ್ದಕ್ಕೂ ಆಯುರ್ವೇದ ಗಿಡಗಳನ್ನು ನೆಟ್ಟು ಸಂರಕ್ಷಿಸುವುದು, ಆಮ್ಲಜನಕ ಹೊರಸೂಸುವ ಗಿಡಗಳನ್ನು ನೆಡುವುದರ ಜೊತೆಯಲ್ಲಿ ಹೂ ಗಿಡಗಳನ್ನು ಬೆಳೆಸುವುದು. ಬೋಟಿನಲ್ಲಿ ವಿಹರಿಸುವವರಿಗೆ ಲೆ„ಫ್ ಜಾಕೆಟ್ ಅಳವಡಿಸುವುದು, ಪ್ರವಾಸಿಗರ ರಕ್ಷಣೆಗೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸುವುದು, ಶೌಚಾಲಯ ಮತ್ತು ಸ್ನಾನಗƒಹದ ನಿರ್ಮಾಣ, ಬೋಟಿನಲ್ಲಿ ವಿಹರಿಸುವ ಸಾರ್ವಜನಿಕರಿಗೆ ಜೀವ ವಿಮೆ ಒದಗಿಸಲು ಯೋಜನೆ ರೂಪಿಸಲಾಗಿದೆ.
Advertisement
ಹೆಚ್ಚಿನ ಅನುದಾನಕ್ಕೆ ಮನವಿಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಕೆರೆಯ ಅಭಿವೃದ್ಧಿ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ 2 ಬೋಟಿಂಗ್ ಮತ್ತು ಸೋಲಾರ್ ದೀಪಗಳನ್ನು ಒದಗಿಸಲಾಗಿದೆ. ಜಾರಂದಾಯ ಕೆರೆಗೆ ಹೋಗುವ ಸಾರ್ವಜನಿಕ ರಸ್ತೆ, ಹೆ„ಮಾಸ್ಕ್ ವಿದ್ಯುತ್ ದೀಪ ಮತ್ತು ಉದ್ಯಾನವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಅನುದಾನಕ್ಕಾಗಿ ಬೆಳಪು ಗ್ರಾ.ಪಂ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಇಲ್ಲಿ ಬೋಟಿಂಗ್‌ನ್ನು ನಡೆಸುವ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ಮತ್ತು ವಿಕಲಚೇತನರಿಗೆ ಬೋಟ್ ರೈಡಿಂಗ್ ಉಚಿತವಾಗಿ ನೀಡಲಾಗುವುದು. ಶಾಲಾ ಮಕ್ಕಳಿಗೆ ರಿಯಾಯತಿ ದರದಲ್ಲಿ ಬೋಟಿಂಗ್, ಜಲಕ್ರೀಡೆ, ನದಿ ದಾಟುವಿಕೆ, ಆಟೋಟಗಳಿಗೆ, ನೀರಿನ ಪಾಠಗಳಿಗೆ ಉಚಿತವಾಗಿ ಸೇವೆಯನ್ನು ನೀಡಲು ಸಹಕರಿಸುತ್ತೇವೆ. ಕೆರೆಯ ಭಾಗದಲ್ಲಿ ಸಾರ್ವಜನಿಕ ವಸ್ತು ಪ್ರದರ್ಶನ-ಮಾರಾಟ,
ವಿವಿಧ ಮನೋರಂಜನಾ ಕ್ರೀಡೆಗಳನ್ನು ಆಯೋಜಿಸಲಾಗುವುದು. ಪರಿಸರಕ್ಕೆ ಮಾರಕವಾದ ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ ಬಳಸದೆ ಅದರ ಬದಲಾಗಿ ಪರಿಸರ ಸ್ನೇಹ ಎಲ್.ಪಿ.ಜಿ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಬೆಳಪು ಗ್ರಾ.ಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಯೋಜನೆಗೆ ಚಾಲನೆ
ಬೆಳಪು ಗ್ರಾಮದಲ್ಲಿ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಮತ್ತು ಕೈಗಾರಿಕಾ ಪಾರ್ಕ್ ನಿರ್ಮಾಣವಾಗುತ್ತಿದ್ದು ಅದರ ಜತೆಗೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಪ್ರವಾಸಿಗರ ಆಕರ್ಷಣೆಗೆ ಪೂರಕವಾಗುವ ಜಾರಂದಾಯ ಕೆರೆಯ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಗ್ರಾಮೀಣಾಭಿವೃದ್ಧಿಗೆ ಒಂದು ಸವಾಲು ಆಗುವ ರೀತಿಯಲ್ಲಿ ಸುಗ್ರಾಮವನ್ನಾಗಿ ರೂಪಿಸಬಹುದೆಂಬುದಕ್ಕೆ ಪುಟ್ಟ ಬೆಳಪು ಗ್ರಾಮವೇ ಸಾಕ್ಷಿಯಾಗಿದೆ.
-ಡಾ| ದೇವಿಪ್ರಸಾದ್ ಶೆಟ್ಟಿ,
ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್ -ರಾಕೇಶ್ ಕುಂಜೂರು