Advertisement

ಬಾರಾಡಿ ಬೀಡು ಕಂಬಳ ಫಲಿತಾಂಶ: ದಾಖಲೆ ಬರೆದ ಹಕ್ಕೇರಿ ಸುರೇಶ್ ಶೆಟ್ಟಿ

01:30 PM Feb 06, 2022 | Team Udayavani |

ಕಾರ್ಕಳ: ಇಲ್ಲಿನ ಬಾರಾಡಿ ಬೀಡುವಿನಲ್ಲಿ ನಡೆದ 35ನೇ ವರ್ಷದ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟ ಸಂಪನ್ನವಾಗಿದೆ. ಫೆ.5ರಂದು ಆರಂಭವಾದ ಕಂಬಳ ಕೂಟ ಫೆ.6ರಂದು ಮಧ್ಯಾಹ್ನದ ವೇಳೆ ಅಂತ್ಯವಾಗಿದೆ. ಕೋವಿಡ್ ಕಾರಣದಿಂದ ಅಲ್ಪ ವಿರಾಮದ ಬಳಿಕ ಅರಂಭವಾದ ಮೊದಲ ಕೂಟ ಬಾರಾಡಿಯಲ್ಲಿ ನಡೆದಿದೆ.

Advertisement

ಕೂಟದಲ್ಲಿ ಒಟ್ಟು 162 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 2 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 6 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 13 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 30 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 21 ಜೊತೆ, ನೇಗಿಲು ಕಿರಿಯ ವಿಭಾಗದಲ್ಲಿ 90 ಜೊತೆ ಕೋಣಗಳು ಸ್ಪರ್ಧೆ ನಡೆಸಿದೆ.

ವಿಶೇಷವೆಂದರೆ, ಬಾರಾಡಿ ಬೀಡು ಕಂಬಳದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ವಿಜೇತ ಅನುಭವಿ ಓಟಗಾರ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ ಶೆಟ್ಟಿ ಅವರು ಮೂರು ವಿಭಾಗದ ಕೋಣಗಳನ್ನು ಓಡಿಸಿ, ಮೂರು ವಿಭಾಗದಲ್ಲೂ ಫೈನಲ್ ಪ್ರವೇಶಿಸಿ ಪ್ರಥಮ ಸ್ಥಾನ ಪಡೆದ ದಾಖಲೆ ಬರೆದರು.

ಇದನ್ನೂ ಓದಿ:ವಿಂಡೀಸ್ ವಿರುದ್ಧ ಮೊದಲ ಏಕದಿನ: ಟಾಸ್ ಗೆದ್ದ ರೋಹಿತ್; ದೀಪಕ್ ಹೂಡಾ ಪದಾರ್ಪಣೆ

ಬಾರಾಡಿ ಬೀಡು ಕಂಬಳ 2022 ಫಲಿತಾಂಶ

Advertisement

ಕನೆಹಲಗೆ:

ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ

ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ

ಹಲಗೆ ಮೆಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ದ್ವಿತೀಯ: ವಾಲ್ಪಾಡಿ ಹಾಲಾಜೆ ಲೂಯಿಸ್ ಸಲ್ದಾನ

ಹಲಗೆ ಮೆಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ

ಹಗ್ಗ ಹಿರಿಯ:

ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “ಎ”

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ದ್ವಿತೀಯ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ “ಎ”

ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ಹಗ್ಗ ಕಿರಿಯ:

ಪ್ರಥಮ: ಕಡಂದಲೆ ಕೀರ್ತನ್ ಮೋಹಿತ್ ಪಾಣಾರ

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ “ಬಿ”

ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ:

ಪ್ರಥಮ: ಎರ್ಮಾಳ್ ರೋಹಿತ್ ಹೆಗ್ಡೆ “ಎ”

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ದ್ವಿತೀಯ: ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ

ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ನೇಗಿಲು ಕಿರಿಯ:

ಪ್ರಥಮ: ಬೆಳುವಾಯಿ ಕಂಡಿಗೆ ಬಾಳಿಕೆಮನೆ ರತ್ನಾಕರ ಶೆಟ್ಟಿ “ಎ”

ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ದ್ವಿತೀಯ: ಭಟ್ಕಳ ಹೆಚ್. ಎನ್ ನಿವಾಸ ಪಿನ್ನುಪಾಲ್

ಓಡಿಸಿದವರು: ಭಟ್ಕಳ ಶಂಕರ್

Advertisement

Udayavani is now on Telegram. Click here to join our channel and stay updated with the latest news.

Next