Advertisement

ಜನರು ದೂರು ನೀಡಿದರೆ ಬಾರ್‌ ಸ್ಥಳಾಂತರ: ಮಹೇಶ್‌

02:03 PM Feb 17, 2021 | Team Udayavani |

ಯಳಂದೂರು: ಪಟ್ಟಣದ ಬಳೇಪೇಟೆಯಲ್ಲಿರುವ ಬಾರ್‌ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಸಾರ್ವಜನಿಕರು ದೂರು ನೀಡಿದರೆ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಎನ್‌. ಮಹೇಶ್‌ ತಿಳಿಸಿದರು.

Advertisement

ಪಟ್ಟಣದ 10 ನೇ ವಾರ್ಡ್‌ನಲ್ಲಿ ಜಾಂಡಿಸ್‌ ಹಾಗೂ ಟೈಫಾಯ್ಡ ಜ್ವರದಿಂದ ಮಕ್ಕಳು ಬಳಲುತ್ತಿರುವ ಹಿ‌ನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಸಾರ್ವಜನಿಕರ ದೂರು ಸ್ವೀಕರಿಸಿ ಮಾತನಾಡಿದರು.

ಬಳೇಪೇಟೆಯಲ್ಲಿ ಅಕ್ಕಪಕ್ಕದಲ್ಲೇ 2 ಬಾರ್‌ಗಳಿಗೆ ಇಲ್ಲಿ ರಾತ್ರಿ ವೇಳೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿರುತ್ತದೆ. ಇಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಅಕ್ಕಪಕ್ಕದಲ್ಲಿರುವಮನೆಗಳ ಹೆಂಗಸರು, ಮಕ್ಕಳಿಗೆ ಮುಜುಗರವಾಗುವುದರ ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಇಲ್ಲಿರುವ ಬಾರ್‌ಗಳನ್ನು ಬೇರೆಡೆ ಸ್ಥಳಾಂತರಗೊಳಿಸಲು ಸಾರ್ವಜನಿಕರು ದೂರು ನೀಡಿದರೆ ಕ್ರಮ ವಹಿಸುತ್ತೇನೆ. ಅಲ್ಲಿಯವರೆಗೆ ಇಲ್ಲಿ ನಿತ್ಯ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಕುಡುಕರ ಕಿರಿಕಿರಿಯನ್ನು ತಪ್ಪಿಸಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿದರು.

ಪಟ್ಟಣದ ಹಳ್ಳದ ಬೀದಿಗೆ ರಸ್ತೆಯೇ ಇಲ್ಲ. ಇಲ್ಲಿಗೆ ಇದ್ದ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ.ಇದನ್ನು ಪಟ್ಟಣ ಪಂಚಾಯಿತಿಯ ಈ ಹಿಂದಿನಅಧಿಕಾರಿಗಳು ಖಾತೆಯನ್ನು ಮಾಡಿಕೊಟ್ಟಿದ್ದಾರೆ. ನಮಗೆ ಇಲ್ಲಿ ಒಂದು ಆಟೋ ಬರಲೂ ಸಾಧ್ಯವಿಲ್ಲ. ಹಾಗಾಗಿ ಇಲ್ಲಿನ ರಸ್ತೆಯ ಜಾಗವನ್ನು ತೆರವುಗೊಳಿಸಿಕೊಡಬೇಕು. ಚರಂಡಿ ಹಾಗೂ ರಸ್ತೆನಿರ್ಮಿಸಿಕೊಡಬೇಕು. ಈ ಹಿಂದೆ ನೀವು ಇಲ್ಲಿಗೆಭೇಟಿ ನೀಡಿದ್ದ ಸಂದರ್ಭದಲ್ಲೂ ನಿಮಗೆ ಮನವರಿಕೆ ಮಾಡಿಕೊಡಲಾಗಿದ್ದು ಇದಕ್ಕೆ ಪರಿಹಾರಸಿಕ್ಕಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರಿದರು.

ಇಲ್ಲಿನ ಮುಸ್ಲಿಂ ಬೀದಿ, ಜನತಾ ಕಾಲೋನಿ, ಪರಿಶಿಷ್ಟ ಜಾತಿಯ ಬೀದಿಗಳಿಗೆ ಶಾಸಕ ಭೇಟಿನೀಡಿದ್ದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಂ.ಸಿ. ನಾಗರತ್ನ, ಇಲ್ಲಿನ ಕೆಲ ಭಾಗದಲ್ಲಿಕುಡಿಯುವ ನೀರಿನ ಪೈಪ್‌ ಒಡೆದಿತ್ತು. ಇದನ್ನುಫೆ.11ರಂದು ದುರಸ್ತಿ ಮಾಡಲಾಗಿದೆ. ಕುಡಿಯುವನೀರಿನ ಸ್ಯಾಂಪಲ್‌ಗ‌ಳನ್ನು ಲ್ಯಾಬ್‌ಗ ಕಳುಹಿಸಿದ್ದುಇದರ ವರದಿಯೂ ಕೂಡ ಪಾಸಿಟಿವ್‌ ಬಂದಿದೆ. ಹಾಗಾಗಿ ಈ ಸಮಸ್ಯೆ ನೀಗಿದೆ. ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದರು.ಇಲ್ಲಿಗೆ ಸೆಸ್ಕ್ ಕಚೇರಿಯ ಮುಂಭಾಗದಲ್ಲಿನ ಶೌಚಗೃಹಗಳು ನಿರುಪಯುಕ್ತವಾಗಿದೆ. ಇದರ ಬಳಕೆಗೆ ಸಾರ್ವಜನಿಕರು ಮುಂದಾಗುತ್ತಿಲ್ಲ. ಅಲ್ಲದೆ ಇಲ್ಲಿರುವ ಪಟ್ಟಣ ಪಂಚಾಯ್ತಿಯ ಸ್ಥಳವನ್ನು ಮಾಂಸದ ಅಂಗಡಿಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Advertisement

ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಜಾಂಡಿಸ್‌ನಿಂದ ಬಳಲುತ್ತಿದ್ದ ರೋಗಿಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಆರೊಗ್ಯಾಧಿಕಾರಿ ಮಹೇಶ್‌ಕುಮಾರ್‌, ಜೆಇ ನಾಗೇಂದ್ರ, ರಜಸ್ವ ನಿರೀಕ್ಷಕ ನಂಜುಂಡಶೆಟ್ಟಿ, ಪಿಎಸ್‌ಐ ಕರಿಬಸಪ್ಪ, ಪಪಂ ಸದಸ್ಯ ಬಿ. ರವಿ ಮುಖಂಡರಾದ ನಿಂಗರಾಜು, ಮಲ್ಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next