Advertisement

ವಕೀಲರ ಸಂಘದ ಚುನಾವಣೆ ಬಹಿಷ್ಕಾರ ಅಪ್ರಬುದ್ಧ

06:50 PM Jan 23, 2021 | Team Udayavani |

ಸುರಪುರ: ವಕೀಲರ ಸಂಘದ ಚುನಾವಣೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಚುನಾವಣೆ  ಬಹಿಷ್ಕರಿಸುವುದಾಗಿ ಕೆಲ ವಕೀಲರು ನೀಡಿರುವ
ಹೇಳಿಕೆ ಅಪ್ರಬುದ್ಧತೆಯಿಂದ ಕೂಡಿದೆ. ಇದಕ್ಕೆ ಯಾವುದೇ ಮಾನ್ಯತೆಯಿಲ್ಲ. ಕಾನೂನು ಚೌಕಟ್ಟಿನಡಿ ನಿಯಮಾನುಸಾರವೇ ಚುನಾವಣೆ ನಡೆಯುತ್ತಿದೆ ಎಂದು
ವಕೀಲರ ಸಂಘದ ಅಧ್ಯಕ್ಷ ಮಹದ್‌ಹುಸೇನ್‌ ಹೇಳಿದರು. ವಕೀಲರ ಸಂಘದದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

Advertisement

ಮಾಜಿ ಅಧ್ಯಕ್ಷ, ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ಅಧ್ಯಕ್ಷ-ಉಪಾಧ್ಯಕ್ಷ ಸೇರಿದಂತೆ ಇತರೆ ಪದಾಧಿ ಕಾರಿಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದ್ದು ಮತದಾರರ ಪಟ್ಟಿಯೂ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಎಲ್ಲವೂ ಚುನಾವಣೆ ಇಲಾಖೆ ನಿಯಮ
ಪ್ರಕಾರವೇ ನಡೆಯುತ್ತಿದೆ. ಆದರೆ ಕೆಲವರು ಕಾನೂನು ಬಾಹಿರವಾಗಿ ಚುನಾವಣೆ ನಡೆಯುತ್ತಿದೆ ಎಂದು  ಆರೋಪಿಸಿ ಚುನಾವಣಾಧಿಕಾರಿಗೆ ದೂರು ನೀಡಿರುವುದು ಸೋಲಿನ ಭೀತಿಯಿಂದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಂಘ ಸ್ವತಂತ್ರವಾಗಿತ್ತು. ಕಳೆದ 4 ವರ್ಷಗಳಿಂದ ಸಂಘ ರಾಜ್ಯ ಪರಿಷತ್‌ ಸದಸ್ಯತ್ವ ಹೊಂದಿದೆ. ಹೀಗಾಗಿ ಇನ್ನೊಂದು ಸಂಘ ರಚನೆಗೆ ಅವಕಾಶವಿಲ್ಲ.
ಮೇಲಾಗಿ ಇಲ್ಲಿ ಸದಸ್ಯತ್ವ ರದ್ದಾಗದ ಹೊರತು ಇನ್ನೊಂದು ಸಂಘ ರಚಿಸಿಕೊಳ್ಳಲು ಬರುವುದಿಲ್ಲ. ಹೀಗಾಗಿ ಇದೊಂದು ಕಾನೂನು ಪರಿಜ್ಞಾನವಿಲ್ಲದೇ ನೀಡಿರುವ ಹೇಳಿಕೆಯಾಗಿದೆ ಎಂದರು.

ಯಾರಿಗೂ ಒತ್ತಡ ಹೇರಿಲ್ಲ, ಬೆದರಿಕೆ ಹಾಕಿಲ್ಲ. ನಮ್ಮ ಪೆನಲ್‌ ಗಟ್ಟಿಯಾಗಿದೆ. ನ್ಯಾಯುತವಾಗಿ ಚುನಾವಣೆ ಎದುರಿಸುತ್ತೇವೆ. ಚುನಾವಣೆ ಬಹಿಷ್ಕರಿಸಲು ಇವರ್ಯಾರು? ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೆ ಚುನಾವಣೆ ನಿಲುವುದಿಲ್ಲ. ಆರೋಪಿಸಿದವರೆಲ್ಲರೂ ಮತದಾರರಾಗಿದ್ದಾರೆ. ಮತದಾನ ಮಾಡುವುದು ಬಿಡುವುದು ಅವರಿಗೆ ಸೇರಿದ್ದು ಎಂದರು.

ಈ ವೇಳೆ ಜಿ.ಎಸ್‌. ಪಾಟೀಲ, ಬಿ.ಎಚ್‌. ಕಿಲ್ಲೇದಾರ, ರಮಾನಂದ ಕವಲಿ, ಉದಯಸಿಂಗ್‌, ವಿ.ಎಸ್‌. ಜ್ಯೋಶಿ, ವಿ.ಎಸ್‌. ಸಿದ್ರಾಮಪ್ಪ, ಯಲ್ಲಪ್ಪ ಹುಲಿಕಲ್‌, ಪ್ರಕಾಶ ಕವಲಿ, ವೆಂಕಟೇಶ ನಾಯಕ, ಸುರೇಂದ್ರ ದೊಡ್ಮನಿ, ಆದಪ್ಪ ಹೊಸಮನಿ, ಸಂತೋಷ ಗಾರಂಪಳ್ಳಿ, ಅಶೋಕ ಕವಲಿ, ವೆಂಕೋಬ ದೇಸಾಯಿ, ಸಿದ್ದು ಬಿರೇದಾರ, ಮಲು ಬೋವಿ, ಗೋಪಾಲ ತಳವಾರ, ರವಿ ನಾಯಕ, ಶ್ರೀದೇವಿ ಪಾಟೀಲ, ಸಂಗಣ್ಣ, ಅಯ್ಯಣ್ಣ ಕೆಂಭಾವಿ, ಸವಿತಾ ಬಿರಾದಾರ, ಬೈಚಬಾಳ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next