Advertisement

ಬಡ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಬಾಪೂಜಿ ಸಂಸ್ಥೆ ಬದ್ಧ

12:31 PM Jul 05, 2017 | |

ತಾಳಿಕೋಟೆ: ಶಾಲೆಯಲ್ಲಿ ಓದುತ್ತಿರುವಂತಹ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪುಸ್ತಕ ಹಾಗೂ ಸಮವಸ್ತ್ರ
ನೀಡಿ ಮಕ್ಕಳ ಶಿಕ್ಷಣಕ್ಕೆ ನಿಮಿಷಾಂಬಾ ಏಜ್ಯೂಕೇಶನ್‌ ಸಂಸ್ಥೆ ಅನಕೂಲ ಕಲ್ಪಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಘನಶ್ಯಾಮ
ಚವ್ಹಾಣ ಹೇಳಿದರು.

Advertisement

ಸ್ಥಳೀಯ ನಿಮಿಷಾಂಬಾ ಏಜ್ಯೂಕೇಶನ್‌ ಸೊಸೈಟಿ  ಆಶ್ರಯದಲ್ಲಿ ನಡೆಯುತ್ತಿರುವ ಬಾಪೂಜಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಕಲಿಕೆ ಗುಣಮಟ್ಟ ಹೆಚ್ಚಿಸಲು ಸಂಸ್ಥೆ ಎಲ್ಲ ರೀತಿಯ ಕ್ರಮಕ್ಕೆ 
ಮುಂದಾಗಿದೆ. ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪ್ರತಿಭಾವಂತ ಬಡ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ
ಉಚಿತವಾಗಿ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸುತ್ತಿದೆ. ಈ ಸಂಸ್ಥೆಯು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಸದುಪಯೋಗ ಮಾಡಿಕೊಂಡು ಶಿಕ್ಷಣವಂತರಾಗಿ ಸಂಸ್ಥೆ ಕೀರ್ತಿ ಹೆಚ್ಚಿಸಲು 
ಮುಂದಾಗಬೇಕೆಂದರು.

ಮೌಲಾಸಾಬ ನದಾಫ್‌ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದರೊಂದಿಗೆ ಪ್ರತಿಭೆಗೆ ತಕ್ಕಂತೆ ಶಿಕ್ಷಣವನ್ನು
ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿ ನೀಡಲಾಗುತ್ತಿದೆ. ಪ್ರತಿಭಾವಂತ ಬಡ ಮಕ್ಕಳಿಗೆ ಶಾಲೆಯ ಫಿ ಕಟ್ಟಲು ಸಹ
ಆಗದೇ ಪಾಲಕರು ಪರದಾಡುತ್ತಿದ್ದಾರೆ. ಇಂತಹ ದಿನಮಾನದಲ್ಲಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸುವುದರೊಂದಿಗೆ ಉತ್ತಮ ಶಿಕ್ಷಣದ ಜೊತೆಗೆ ಜ್ಞಾನ ಬಂಡಾರವಾದ ಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿರುವ ಸಂಸ್ಥೆ ಅಧ್ಯಕ್ಷ ಘನಶಾಮ ಚವ್ಹಾಣ ಅವರ ಕಾರ್ಯ ಶ್ಲಾಘನೀಯ. ನಿಮಿಷಾಂಬಾ ಏಜ್ಯೂಕೇಶನ್‌ ಸೊಸೈಟಿ ನೀಡುತ್ತಿರುವ ಪ್ರೋತ್ಸಾಹ ಸದುಪಯೋಗ ಮಾಡಿಕೊಂಡು ಸಂಸ್ಥೆ ಹೆಸರನ್ನು ಹೆಚ್ಚಿಸಬೇಕೆಂದರು. ಸಂಸ್ಥೆ ಕಾರ್ಯದರ್ಶಿ ಸೀಮಾ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಇದೇ ಸಮಯದಲ್ಲಿ ಭೀಮಣ್ಣ ಶಿವಣಗಿ ಶಾಲೆಯ ಪ್ರತಿಭಾವಂತ ಮಕ್ಕಳಿಅಗೆ ಉಚಿತವಾಗಿ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. 

ಎ.ಪಿ.ಜೆ. ಅಬ್ದುಲ್‌ಕಲಾಂ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಮಂಜುನಾಥ ಗಸ್ತಿ, ಶಾಲಾ ಮುಖ್ಯಗುರು 
ಶಿವಾನಂದ ಹಿರೇಮಠ, ಶಿಕ್ಷಕಿ ಶೃತಿ ದೊಡಮನಿ, ಜಯಶ್ರೀ ಕೊಣ್ಣೂರ, ಭುವನೇಶ್ವರಿ ವಸ್ತ್ರದ, ಭುವನೇಶ್ವರಿ ಗುಡ್ಡಣ್ಣವರ
ಇದ್ದರು. ಶಿಕ್ಷಕಿ ಶೈಲಾ ತೋಳನೂರ ಸ್ವಾಗತಿಸಿದರು. ಶಿಕ್ಷಕಿ ಶಿವಲೀಲಾ ಸಜ್ಜನ ನಿರೂಪಿಸಿದರು. ಶಿಕ್ಷಕಿ ಜಯಶ್ರೀ ಚಿನಗುಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next