ಅಹ್ಮದಾಬಾದ್: ಗುಜರಾತ್‌ನ ಸ್ವಾಮಿ ನಾರಾಯಣ ಸಂಸ್ಥಾನ (ಬೋಚಾಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ-ಬ್ಯಾಪ್ಸ್) ಮುಖ್ಯಸ್ಥ ಸ್ವಾಮಿ ಮಹಾರಾಜರು; 46 ಯುವಕರಿಗೆ ಶನಿವಾರ ಸನ್ಯಾಸ ದೀಕ್ಷೆ ನೀಡಿದ್ದಾರೆ.
ಅಂದ ಹಾಗೆ ಸನ್ಯಾಸ ಸ್ವೀಕಾರ ಮಾಡಿದವರಲ್ಲಿ ಐಐಎಂ ಉದಯಪುರದ ಹಳೆಯ ವಿದ್ಯಾರ್ಥಿಗಳು, ಎಂಜಿನಿಯರಿಂಗ್ ಪದವೀಧರರು ಇದ್ದಾರೆ ಎನ್ನುವುದು ಗಮನಾರ್ಹ. ಒಟ್ಟು 46 ಮಂದಿ ಸನ್ಯಾಸ ಸ್ವೀಕರಿಸಿದ್ದಾರೆ.
ಐವರು ಸ್ನಾತಕೋತ್ತರ ಪದವೀಧರರು, 23 ಪದವೀಧರರು, 16 ಮಂದಿ ಎಂಜಿನಿಯರ್‌ಗಳು, ತಲಾ ಒಬ್ಬ ಎಂಬಿಎ, ಎಂಪಿಎಚ್ (ಸಾರ್ವಜನಿಕ ಆರೋಗ್ಯ) ಪದವಿ ಪಡೆದವರು ಸೇರಿದ್ದಾರೆ. ಹೊಸತಾಗಿ ಸನ್ಯಾಸ ಪಡೆದವರು ಬೊಟದ್ ಜಿಲ್ಲೆಯ ಸಾರಂಗಪುರದಲ್ಲಿ 7 ವರ್ಷಗಳ ಕಾಲ ತರಬೇತಿ ಪಡೆಯಲಿದ್ದಾರೆ.
ಈ ವೇಳೆ ಅವರು ಸಂಸ್ಕೃತ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆ ಕಲಿಯಲಿದ್ದಾರೆ. ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಭಗವದ್ಗೀತಾ, ಸ್ವಾಮಿ ನಾರಾಯಣ ತಣ್ತೀಶಾಸ್ತ್ರವನ್ನು ಅಧ್ಯಯನ ಮಾಡಲಿದ್ದಾರೆ.