Advertisement

Temple: ಇಂದು ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆ ಮಾಡಲಿದ್ದಾರೆ ಪ್ರಧಾನಿ ಮೋದಿ

08:22 AM Feb 14, 2024 | Team Udayavani |

ಅಬುಧಾಬಿ: ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ನಿರ್ಮಿಸಿರುವ ವಿಸ್ತಾರವಾದ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಬುಧವಾರ) ಉದ್ಘಾಟಿಸಲಿದ್ದಾರೆ.

Advertisement

ಸುಮಾರು 27 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ನಿರ್ಮಿಸಲಾದ ದೇವಾಲಯ ಅಬುಧಾಬಿಯ ಮೊದಲ ಹಿಂದೂ ದೇವಾಲಯವಾಗಿದ್ದು, ಇದು ಭಾರತೀಯ ಸಂಸ್ಕೃತಿಯ ವಿಶಿಷ್ಟ ಮಿಶ್ರಣ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗುರುತನ್ನು ಹೊಂದಿದೆ.

ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಇಲ್ಲಿ ನಿರ್ಮಿಸಲಾದ ಮೊದಲ ಹಿಂದೂ ದೇವಾಲಯವನ್ನು ಉದ್ಘಾಟನೆ ಮಾಡಲಿದ್ದಾರೆ, ಅಲ್ಲದೆ ಮುಂಬರುವ ತಿಂಗಳಿನಿಂದ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಲಿದೆ ಎಂದು ದೇವಳದ ಆಡಳಿತ ಮಂಡಳಿ ಹೇಳಿದೆ.

ದುಬೈ-ಅಬುಧಾಬಿ ಶೇಖ್ ಜಾಯೆದ್ ಹೆದ್ದಾರಿಯ ಅಲ್ ರಹ್ಬಾ ಬಳಿಯ ಅಬು ಮುರೇಖಾದಲ್ಲಿ ಯುಎಇ ಸರ್ಕಾರವು ದಾನವಾಗಿ ನೀಡಿದ 27 ಎಕರೆ ಜಮೀನಿನಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. 2019 ರಲ್ಲಿ ಇದರ ಶಿಲಾನ್ಯಾಸ ಸಮಾರಂಭ ಕಾರ್ಯಕ್ರಮ ನಡೆದಿತ್ತು ಎನ್ನಲಾಗಿದೆ.

ಇಲ್ಲಿ ಪ್ರಾರ್ಥನಾ ಮಂದಿರದಲ್ಲಿ 3,000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ, ಒಂದು ಸಮುದಾಯ ಕೇಂದ್ರ, ಸಭಾಂಗಣ, ಒಂದು ಗ್ರಂಥಾಲಯ ಮತ್ತು ಮಕ್ಕಳ ಉದ್ಯಾನವನ ಒಳಗೊಂಡಿದೆ.

Advertisement

ದೇವಾಲಯದ ಮುಂಭಾಗ ಅಮೃತಶಿಲೆಯ ಕೆತ್ತನೆಗಳನ್ನು ಹೊಂದಿದ್ದು, ರಾಜಸ್ಥಾನ ಮತ್ತು ಗುಜರಾತ್‌ನ ನುರಿತ ಕುಶಲಕರ್ಮಿಗಳಿಂದ ಕೆತ್ತನೆ ಕಾರ್ಯ ನಡೆದಿದ್ದು ಇದಕ್ಕಾಗಿ 25,000 ಕಲ್ಲುಗಳನ್ನು ಬಳಸಲಾಗಿದೆ.

ಈ ದೇವಾಲಯವು ಸಾಂಪ್ರದಾಯಿಕ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಇದು ಯುಎಇಯ ಏಳು ಎಮಿರೇಟ್‌ಗಳಲ್ಲಿ ಒಂದನ್ನು ಪ್ರತಿನಿಧಿಸುವ ಕಿರೀಟವನ್ನು ಹೋಲುವಂತಿದ್ದು, ದೇವಾಲಯ 108 ಅಡಿ ಎತ್ತರದಲ್ಲಿದೆ.

ಅಯೋಧ್ಯೆ ಮಂದಿರದ ರೀತಿಯಲ್ಲೇ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ: Yenepoya Hospital; 9ರ ಬಾಲಕಿಯ 40 ಕ್ಯಾನ್ಸರ್‌ ಗಡ್ಡೆಗಳಿಗೆ ಶಸ್ತ್ರಚಿಕಿತ್ಸೆ

Advertisement

Udayavani is now on Telegram. Click here to join our channel and stay updated with the latest news.

Next