Advertisement

ಬಪ್ಪಾ ಮೋರ್ಯಾ-ಶ್ರೀ ಗಣೇಶ ವಂದನ ಕಾರ್ಯಕ್ರಮ

02:08 PM Sep 21, 2021 | Team Udayavani |

ಕುರ್ಲಾ: ಬಂಟರ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಸಂಚಾಲಕತ್ವದಲ್ಲಿರುವ ರಮಾನಾಥ ಪಯ್ಯಡೆ ಆದರಾತಿಥ್ಯ ಮ್ಯಾನೇ ಜ್‌ ಮೆಂಟ್‌ ಕಾಲೇಜಿನ ಆಶ್ರಯದಲ್ಲಿ ಸೆ. 17ರಂದು ಬಪ್ಪಾ ಮೋರ್ಯಾ-ಶ್ರೀ ಗಣೇಶ ವಂದನ ಕಾರ್ಯಕ್ರಮವು ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.

Advertisement

ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಅವರ ನೇತೃತ್ವದಲ್ಲಿ ರಮಾನಾಥ ಪಯ್ಯಡೆ ಆದ ರಾತಿಥ್ಯ ಮ್ಯಾನೇಜ್‌ ಮೆಂಟ್‌ ಕಾಲೇ ಜಿನ ಉಸ್ತು ವಾರಿ ಪ್ರಾಂಶುಪಾಲೆ ಸಂಯೋಗಿತಾ ಮೊರಾರ್ಜಿ ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬಂದಿ ಪೂಜಾ ಕಾರ್ಯಕ್ರಮ ವನ್ನು ಆಯೋಜಿಸಿದ್ದರು.

ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಮತ್ತು ಕವಿತಾ ಐ. ಆರ್‌. ಶೆಟ್ಟಿ ದಂಪತಿ, ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಪೊವಾಯಿ ಶಿಕ್ಷಣ ಸಮಿ ತಿಯ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ ಅವರು ಶ್ರೀ ಗಣೇಶ ಮೂರ್ತಿಗೆ ಮಹಾ ಮಂಗಳಾರತಿಗೈದರು.

ಇದನ್ನೂ ಓದಿ:ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಕಿಶೋರ್‌ ಕುಮಾರ್‌ ಕುತ್ಯಾರ್‌, ಆದರ್ಶ್‌ ಶೆಟ್ಟಿ, ಸಮಿತಿಯ ಕಾರ್ಯದರ್ಶಿ ಸಿಎ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಸಿಎ ಪ್ರದೀಪ್‌ ಶೆಟ್ಟಿ, ಸಹ ಸಂಚಾಲಕರಾದ ರಂಜಿತ್‌ ಶೆಟ್ಟಿ, ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ಮಹಿಳಾ ವಿಭಾಗದ ಕೋಶಾಧಿಕಾರಿ ಸುಜಾತಾ ಗುಣಪಾಲ್‌ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಕವಿತಾ ಐ. ಆರ್‌. ಶೆಟ್ಟಿ, ಸಂಘದ ಉನ್ನತ ಶಿಕ್ಷಣ ಸಮಿತಿಯ ಸಿಇಒ ಪ್ರಕಾಶ್‌ ಮೋರೆ, ಉಮಾ ಕೃಷ್ಣ ಶೆಟ್ಟಿ ಮ್ಯಾನೇಜ್‌ಮೆಂಟ್‌ ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲ ಪ್ರಶಾಂತ್‌ ಶಿಂಧೆ, ಆರತಿ ಶಶಿಕಿರಣ್‌ ಶೆಟ್ಟಿ ಜೂನಿಯರ್‌ ಕಾಲೇಜಿನ ಉಪ ಪ್ರಾಂಶುಪಾಲೆ ಶೈಲಾ ಶೆಟ್ಟಿ, ಸಂಸ್ಥೆಯ ವಾಚನಾಲಯ ವಿಭಾಗದ ಸತ್ಯಾಶೆಟ್ಟಿ, ರಮಾನಾಥ ಪಯ್ಯಡೆ ಆದರಾತಿಥ್ಯ ಕಾಲೇಜಿನ ಶಿಕ್ಷಕರು, ಶಿಕ್ಷಕೇತರ ಸಿಬಂದಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

 

Advertisement

Udayavani is now on Telegram. Click here to join our channel and stay updated with the latest news.

Next