ಬಂಟ್ವಾಳ: ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಲಾಕ್‌ಡೌನ್ ಮಾದರಿಯ ಕರ್ಫ್ಯೂ ಜಾರಿ ಗೊಳಿಸಿದ್ದರೂ, ನಿರ್ಮಾಣ ಕಾರ್ಯಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ಬುಧವಾರವೂ ನಿರಾತಂಕವಾಗಿ ನಡೆದವು.
ಸರಕಾರದ ಅನುದಾನಗಳ ಮೂಲಕ ಸಾಕಷ್ಟು ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇಂತಹ ಎಲ್ಲ ಕಾಮಗಾರಿಗಳನ್ನು ಕರ್ಫ್ಯೂ ಅವಧಿಯಲ್ಲೂ ಮುಂದುವರಿಸುವುದಕ್ಕೆ ಅವಕಾಶ ನೀಡಿದೆ. ಹೀಗಾಗಿ ಎಲ್ಲ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿ ತಮ್ಮ ಕೆಲಸ ನಿರ್ವಹಿಸಿದರು.
ಸರಕಾರದ ಅನುದಾನಗಳ ಮೂಲಕ ಹತ್ತಾರು ಕಡೆಗಳಲ್ಲಿ ರಸ್ತೆ, ಸೇತುವೆ, ಕಿಂಡಿ ಅಣೆಕಟ್ಟುಗಳು, ಕಟ್ಟಡ ನಿರ್ಮಾಣಗಳು ಹೀಗೆ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಮಳೆಗಾಲ ಆರಂಭಗೊಂಡರೆ ಬಹುತೇಕ ಕಾಮಗಾರಿಗಳನ್ನು ಮುಂದುವರಿಸಲು ಅಸಾಧ್ಯ ವಾಗುತ್ತದೆ. ಜತೆಗೆ ಸಾಕಷ್ಟು ಕಡೆ ಗಳಲ್ಲಿ ಮಳೆಗಾಲಕ್ಕೆ ಮುಂಚಿತವಾಗಿ ಕಾಮಗಾರಿಗಳನ್ನು ಮುಗಿಸಬೇಕಾದ ಅನಿ ವಾರ್ಯವೂ ಗುತ್ತಿಗೆದಾರರ ಮೇಲಿರುತ್ತದೆ.
ಹೀಗಾಗಿ ಕರ್ಫ್ಯೂ ಸಮಯದಲ್ಲಿ ಈ ಕಾಮಗಾರಿಗಳು ನಿಂತರೆ ಮತ್ತಷ್ಟು ತೊಂದರೆಗಳು ಉಂಟಾಗಲಿದೆ. ಮಳೆ ಗಾಲಕ್ಕೆ ಮುಂಚಿತವಾಗಿ ಇನ್ನು ಗರಿಷ್ಠ ಎಂದರೆ 1 ತಿಂಗಳ ಕಾಮಗಾರಿ ನಡೆಸು ವುದಕ್ಕೆ ಅವಕಾಶ ಸಿಗಬಹುದು. ಈಗಾ ಗಲೇ ಮಳೆ ಬರುತ್ತಿರುವುದರಿಂದ ಕಾಮಗಾರಿಗಳಿಗೆ ತೊಂದರೆಯಾಗಿದ್ದು, ಹೀಗಾಗಿ ಕರ್ಫ್ಯೂ ಅವಧಿಯಲ್ಲೂ ಕಾಮಗಾರಿ ಸಾಗಲಿದೆ.
ಬಂಟ್ವಾಳದಲ್ಲಿ ಮುಖ್ಯವಾಗಿ ಬಿ.ಸಿ. ರೋಡ್‌ನಲ್ಲಿ ಕೈಕುಂಜೆ ರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಬುಧವಾರವೂ ಕಾಮಗಾರಿ ಮುಂದುವರಿದಿದೆ. ಜತೆಗೆ ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾರ್ಯವೂ ನಡೆಯುತ್ತಿದೆ. ಪ್ರಸ್ತುತ ವಾಹನಗಳ ಓಡಾಟ ಇಲ್ಲದೇ ಇರುವುದರಿಂದ ಕಾಮಗಾರಿಯ ವೇಗಕ್ಕೂ ಅನುಕೂಲವಾಗಲಿದೆ.