Advertisement
ನ. 16ರಂದು ರಾಜ್ಯಾದ್ಯಂತ ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆಯ ಮೊದಲನೇ ಕಾರ್ಯಕ್ರಮ ನಡೆದಿದ್ದು, ದ.ಕ. ಜಿಲ್ಲೆಗೆ ಇಲಾಖೆಯ ಕೇಂದ್ರ ಕಚೇರಿಯ ಉಪನಿರ್ದೇಶಕ ಶ್ರೀಹರ್ಷ ಅವರು ಭೇಟಿ ನೀಡಿ ಪುತ್ತೂರಿನ ಬೀರಮಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ನಿಲಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.
ಹಿಂದುಳಿದ ಕಲ್ಯಾಣ ಇಲಾಖೆಯ ಅಧೀನದಲ್ಲಿ ರಾಜ್ಯಾದ್ಯಂತ ಸುಮಾರು 2,500ರಷ್ಟು ವಿದ್ಯಾರ್ಥಿ ನಿಲಯಗಳಿದ್ದು, 2.50 ಲಕ್ಷ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಇಲಾಖೆಯ ಆಯುಕ್ತ ಶ್ರೀನಿವಾಸ್ ಕೆ. ಅವರ ನೇತೃತ್ವದಲ್ಲಿ ಈ ವಿನೂತನ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ರಾಜ್ಯಾದ್ಯಂತ ಇಲಾಖೆಯ 700ರಷ್ಟು ಸಿಬಂದಿ ಮೊದಲ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದಾರೆ. ಇಲಾಖೆಯ ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಕಲ್ಯಾಣಾಧಿಕಾರಿಗಳು ಹೀಗೆ ಎಲ್ಲರೂ ತಿಂಗಳ 3ನೇ ಶನಿವಾರ ಹಾಸ್ಟೆಲ್ಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕಿದೆ.
Related Articles
ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ ವಿನೂತನ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದ ದೃಷ್ಟಿಯಿಂದ ಇಲಾಖೆಯು 126 ಅಂಶಗಳ ನಮೂನೆಯೊಂದನ್ನು ಸಿದ್ಧಪಡಿಸಿದ್ದು, ಅದರಂತೆ ಪ್ರತಿ ನಿಲಯಗಳಲ್ಲಿ ತಪಾಸಣೆ ನಡೆಸಬೇಕಿದೆ. ಹಾಸ್ಟೆಲ್ಗಳ ಸ್ಥಿತಿಗತಿ ಹೇಗಿದೆ, ಅಲ್ಲಿನ ಉತ್ತಮ, ಧನಾತ್ಮಕ ಅಂಶಗಳೇನು, ಸುಧಾರಣೆ ತರಬೇಕಾದ ಅಂಶಗಳು ಯಾವುವು ಎಂಬುದನ್ನು ಅರಿತು ಇಲಾಖೆಗೆ ವರದಿ ಸಲ್ಲಿಸಬೇಕಿದೆ. ಇದರಿಂದ ರಾಜ್ಯದ ಪ್ರತಿ ಹಾಸ್ಟೆಲ್ಗಳ ಸ್ಥಿತಿಗತಿ ಇಲಾಖೆಯ ಗಮನಕ್ಕೆ ಬರಲಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
Advertisement
ಆಶಯ ಈಡೇರಲು ಅನುಕೂಲ“ಇದು ಇಲಾಖೆಯ ಆಯುಕ್ತರ ಪ್ರಶಂಸನೀಯ ಕಾರ್ಯಕ್ರಮವಾಗಿದ್ದು, ಇದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶಯ ಈಡೇರಲು ಅನುಕೂಲವಾಗಲಿದೆ. ಪ್ರತಿ ಹಾಸ್ಟೆಲ್ಗಳ ಸ್ಥಿತಿ ತ್ವರಿತವಾಗಿ ಇಲಾಖೆಯ ಗಮನಕ್ಕೆ ಬರಲಿದೆ.” – ಬಿಂದಿಯಾ ನಾಯಕ್
ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದ.ಕ. ಸ್ಥಿತಿ ಅರಿಯಲು ಅನುಕೂಲ
ಅಧಿಕಾರಿಗಳು ಸಾಮಾನ್ಯವಾಗಿ ಪ್ರತಿ ಬಾರಿಯೂ ಹಾಸ್ಟೆಲ್ಗಳಿಗೆ ಭೇಟಿ ನೀಡಿದರೂ ಇಲಾಖೆಯ ಆಯುಕ್ತರ ಆದೇಶದಂತೆ ಹೊಸ ಅಭಿಯಾನವಾಗಿ ಮೊದಲ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಈ ಮೂಲಕ ಪ್ರತಿಯೊಬ್ಬ ಸಿಬಂದಿಯೂ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತುಕೊಳ್ಳಲು ಅನುಕೂಲವಾಗಿದೆ. – ಹಾಕಪ್ಪ ಲಮಾಣಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ.