Advertisement
ಇವುಗಳ ಪೈಕಿ ಬಂಟ್ವಾಳ ನಗರದಲ್ಲಿ 2, ಪುದು ಗ್ರಾಮದಲ್ಲಿ 1 ಮಲೇರಿಯಾ ಪ್ರಕರಣ ಪತ್ತೆಯಾಗಿದೆ. ಪುದು, ದೈವಸ್ಥಳ, ಪಂಜಿಕಲ್ಲು, ವಾಮದಪದವು, ಸಜಿಪ, ಅಳಿಕೆ, ಕುರ್ನಾಡು ವಿಟ್ಲ ಭಾಗದಲ್ಲಿ ತಲಾ ಒಂದೊಂದು ಮಲೇರಿಯಾ ಶಂಕಿತ ಪ್ರಕರಣಗಳು ವರದಿ ಆಗಿವೆ. ಪುಂಜಾಲಕಟ್ಟೆ 3, ಬಂಟ್ವಾಳ ನಗರ 2, ಮಂಚಿ 3, ನರಿಕೊಂಬು 2, ಕುರಿಯಾಳ 4 ಸಹಿತ ವಿವಿಧ ಪ್ರದೇಶಗಳಲ್ಲಿ ಒಟ್ಟು 14 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಜನವರಿಯಿಂದ 78 ಶಂಕಿತ ಡೆಂಗ್ಯೂ ಪತ್ತೆಯಾಗಿದ್ದು, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂ ಹಾಗೂ ಮಲೇರಿಯಾ ರೋಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದರು.ಶಂಕಿತವಿರುವ ಪ್ರದೇಶಗಳಿಗೆ ಭೇಟಿ ನೀಡಿ, ಇನ್ನೊಂದು ಸುತ್ತಿನ ಫಾಗಿಂಗ್ ನಡೆಸುವಂತೆ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸೂಚನೆ ನೀಡಿದರು.
ವರ್ಷದಿಂದ ವರ್ಷಕ್ಕೆ ಶಾಲಾ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದ್ದರೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ದಾಖಲಾತಿಯಾಗಿದೆ. ಮಕ್ಕಳ ಕೊರತೆಯಿಂದ ಜಕ್ರಿಬೆಟ್ಟು ಮತ್ತು ತೋರಣಕಟ್ಟೆ ಎರಡು ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ, ಸ್ಯಾಟ್ಸ್ ನ ಆನ್ ಲೈನ್ ದಾಖಲಾತಿಯಲ್ಲಿ ಬಂಟ್ವಾಳ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ಸಭೆಯ ಗಮನಕ್ಕೆ ತಂದರು.