Advertisement

Bantwal: ಕೌಟುಂಬಿಕ ಮನಸ್ತಾಪ; ಪತ್ನಿ ,ಮಾವನಿಗೆ ಚೂರಿ ಇರಿದು ಪರಾರಿಯಾದ ಪತಿ

11:28 AM Jun 16, 2023 | Team Udayavani |

ಬಂಟ್ವಾಳ: ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂದಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌ ನಲ್ಲಿ ನಡೆದಿದೆ.

Advertisement

ಜೂನ್ 15 ರಂದು ರಾತ್ರಿ 10.30 ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು , ಚೂರಿ ಹಿಡಿದುಕೊಂಡು ಬಂದು ಪತ್ನಿ ದಿವ್ಯಳಿಗೆ ಇರಿಯಲು ಯತ್ನಿಸಿದ್ದಾನೆ.

ಈ ವೇಳೆ ಬಿಡಿಸಲು ಹೋದ ಮಾವ ರಾಜೀವರಿಗೆ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯ ಇಬ್ಬರು ಗಂಭೀರವಾಗಿ ಗಾಯಗೊಂಡು, ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುತ್ತಾರೆ.

ಘಟನೆಯ ಕುರಿತು ಅಟೋ ಚಾಲಕ ಯಶೋಧರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಕೌಟುಂಬಿಕ ಮನಸ್ತಾಪದಿಂದಲೇ ಘಟನೆ ನಡೆದಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next