ಬಂಟ್ವಾಳ: ಸಂಬಂಧಿಕರ ಮನೆಗೆ ಹೋಗುವುದಾಗಿ ಮನೆಯಿಂದ ಹೊರಗೆ ಹೋದ ಹದಿಹರೆಯದ ಯುವತಿಯೋರ್ವಳು ವಾಪಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಈಕೆಯ ತಾಯಿ ಗಿರಿಜಾ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ನಿವಾಸಿ ಗಿರಿಜ ಅವರ ದ್ವೀತಿಯ ಮಗಳು ಹರ್ಷಿತಾ (18) ಕಾಣೆಯಾದ ಯುವತಿ.
ಹರ್ಷಿತಾ ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿ ಮನೆಯಲ್ಲಿದ್ದಳು. ಸೆ.16 ರಂದು ರಾತ್ರಿ ಎಂದಿನಂತೆ ಊಟ ಮಾಡಿ ರಾತ್ರಿ 11.30 ರ ಗಂಟೆಗೆ ಸಮೀಪವಿರುವ ಅಕ್ಕನಾದ ಜಯಂತಿ ಅವರ ಮನೆಗೆ ಹೋಗುವುದಾಗಿ ತಿಳಿಸಿ ಹೋಗಿದ್ದಳು. ಬೆಳಿಗ್ಗೆ ಬರುವುದಾಗಿ ತಿಳಿಸಿ ಹೋಗಿದ್ದ ಯುವತಿ ಬರದೆ ಇದ್ದಾಗ ಅವರ ಮನೆಗೆ ತೆರಳಿ ವಿಚಾರಿಸಿದಾಗ ಅವಳು ಮನೆಗೆ ಬಂದಿಲ್ಲವೆಂದು ತಿಳಿಸಿದ್ದಾರೆ.
ಕಾಣೆಯಾದ ಹರ್ಷಿತಾ ಇದೇ ತಿಂಗಳ ಸೆ. 4 ರಂದು ಮನೆಯಲ್ಲಿ ಯಾರಿಗೂ ಹೇಳದೆ ಹೋಗಿದ್ದು, ಮರುದಿನ ಬಂದಿದ್ದಳು. ಅ ವೇಳೆ ವಿಚಾರಿಸಿದಾಗ ಇವಳ ಸ್ನೇಹಿತೆ ಬಿಸಿರೋಡಿನ ದೀಪಿಕಾಳ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಳು. ಹಾಗಾಗಿ ಈ ಬಾರಿಯೂ ಅವಳ ಮನೆಗೆ ತೆರಳಿರಬಹುದು ಎಂದು ಅಂದಾಜಿಸಿ ಅವಳಲ್ಲಿ ವಿಚಾರಿಸಿದಾಗ ಅಲ್ಲಿಗೂ ಬಂದಿಲ್ಲ ಎಂದು ತಿಳಿಸಿದ್ದಾಳೆ.
ಮನೆಗೆ ಬರಬಹುದು ಎಂದು ಕಾದ ಬಳಿಕ ಬಳಿಕ ಸೆ.19 ರಂದು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.