Advertisement

Bantwala: ಗದ್ದೆಗೆ ಪಲ್ಟಿಯಾದ ಖಾಸಗಿ ಬಸ್

03:54 PM Jul 15, 2024 | Team Udayavani |

ಬಂಟ್ವಾಳ: ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ಸರಪಾಡಿ- ಬಿ.ಸಿ.ರೋಡು ಮಧ್ಯೆ ಸಂಚರಿಸುವ ಖಾಸಗಿ ಬಸ್ ಪಲ್ಟಿಯಾದ ಘಟನೆ ಜು.15ರ ಸೋಮವಾರ ನಡೆದಿದೆ.

Advertisement

ಬಸ್ ಸಂಪೂರ್ಣವಾಗಿ ಗದ್ದೆಗೆ ಪಲ್ಟಿಯಾಗಿದ್ದು, ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಿಪರೀತ ಮಳೆಯಿಂದಾಗಿ ಗದ್ದೆಯಲ್ಲಿ ನೀರು ತುಂಬಿದ್ದು, ಹೀಗಾಗಿ ಕೆಲ ಪ್ರಯಾಣಿಕರು ಕೆಸರಿನಿಂದ ತುಂಬಿದ್ದರು ಎನ್ನಲಾಗಿದೆ.

ಹೆಚ್ಚಿನ ಮಾಹಿತಿ ಲಭಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next