Advertisement
ಕೆಲಸದಾಕೆಯೇ ಸ್ನೇಹಿತರ ಜೊತೆ ಸೇರಿಕೊಂಡು ವೃದ್ಧೆಯನ್ನು ಕೊಲೆ ಮಾಡಿ ಆಭರಣ ದೋಚಲು ಯೋಜನೆ ರೂಪಿಸಿದ್ದರು. ಆದರೇ ಬಂಟ್ವಾಳ ಪೋಲೀಸರ ಕಾರ್ಯಕ್ಷಮತೆಯಿಂದ ಕೊಲೆ ಪ್ರಕರಣ ಬಯಲಾಗಿ ಆರೋಪಿಗಳು ಅಂದರ್ ಆಗಿದ್ದಾರೆ. .
Related Articles
Advertisement
ಜ. 26 ರಂದು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ [72] ಎಂಬ ಮಹಿಳೆಯು ಮನೆಯಲ್ಲಿ ಸಾವನ್ನಪ್ಪಿದ್ದು ಇದೊಂದು ಅಸಹಜ ಸಾವು ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆ. 02 ರಂದು ಮೃತೆ ಬೆನೆಡಿಕ್ಟ್ ಕಾರ್ಲೋ ರವರ ಪುತ್ರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಆಗಮಿಸಿ ತಮ್ಮ ತಾಯಿಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿ ದೂರು ನೀಡಿದ್ದರು. ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಈ ವೇಳೆ ಬೆನೆಡಿಕ್ಟ್ ಕಾರ್ಲೋ ರವರನ್ನು ನೋಡಿಕೊಳ್ಳಲು ನೇಮಿಸಿದ್ದ ಅಮ್ಡಾಡಿ ಗ್ರಾಮದ ಎಲ್ಮಾ ಪ್ರಶ್ಚಿತ ಬರೆಟ್ಟೋ, ಕಾರ್ಲೋ ರವರ ಬಳಿ ಇದ್ದ ಬಂಗಾರವನ್ನು ದೋಚಲು ನರಿಕೊಂಬು ನಿವಾಸಿಗಳಾದ ಸತೀಶ ಮತ್ತು ಚರಣ್ ರವರೊಂದಿಗೆ ಸೇರಿಕೊಂಡು ಜ. 25 ರಂದು ಬೆನೆಡಿಕ್ಟ್ ಕಾರ್ಲೋ ರವರ ಮನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.
ಇದೀಗ ಮೂವರು ಆರೋಪಿಗಳನ್ನು ಬಂಧಿಸಿ ನಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಕೊಲೆ ಮಾಡಿ ದೋಚಿದ್ದ 91 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೈಲೆಂಟೈನ್ ಡಿʻಸೋಜಾ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ, ನಾಗರಾಜ್ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಟ್ಲ ಠಾಣಾ ಪಿ.ಎಸ್.ಐ ವಿನೋದ್, ಹಾಗೂ ಹೆಚ್.ಸಿಗಳಾದ ಗಿರೀಶ್, ಸುರೇಶ್, ಜನಾರ್ದನ, ಶ್ರೀಮತಿ ಪ್ರಮೀಳಾ, ಕಿರಣ್, ಪಿ.ಸಿಗಳಾದ ನಝೀರ್, ಪುನೀತ್, ಮನೋಜ್, ಪ್ರಸನ್ನರವರ ತಂಡ ಭಾಗಿಯಾಗಿದ್ದರು.