ಬಂಟ್ವಾಳ: ಬಂಟ್ವಾಳ ನಗರ ಠಾಣಾ ವ್ಯಾಪ್ತಿಯೂ ಸೇರಿದಂತೆ ಹಲವೆಡೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮ ನಿವಾಸಿ ಮೊಹಮ್ಮದ್ ಇರ್ಫಾನ್ ಬಂಧಿತ ಆರೋಪಿ. ಆತ ಬಿ.ಸಿ. ರೋಡು ಸಮೀಪದ ಗಾಣದಪಡು³ನಲ್ಲಿರುವ ಹೋಲ್‌ಸೇಲ್ ಅಂಗಡಿಯೊಂದರ ಶಟರಿನ ಬೀಗವನ್ನು ಮರಿದು ಅಂಗಡಿಯದ್ದ 20 ಸಾವಿರ ರೂ. ಮೌಲ್ಯದ 2 ಮೊಬೈಲ್‌ಗಳು ಹಾಗೂ 10 ಸಾವಿರ ರೂ. ನಗದನ್ನು ಕಳವು ಮಾಡಿದ್ದ. ಈ ಕುರಿತು ಅಂಗಡಿ ಮಾಲಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಜತೆಗೆ ಈತ ಕಳೆದ ವರ್ಷ ಬಿ.ಸಿ. ರೋಡಿನ ಬಸ್ಸು ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿದ್ದ ನ್ಯಾಯವಾದಿಯೊಬ್ಬರ ಕಚೇರಿಗೆ ನುಗ್ಗಿ 3 ಸಾವಿರ ರೂ. ನಗದು ಕಳವು ಮಾಡಿದ್ದ. ಆರೋಪಿಯು ಕೆಲವು ದಿನಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿತೊಟ್ಟುನಲ್ಲಿ ಮನೆಯೊಂದರ ಬೀಗ ಮುರಿದು ನಗದು ಕಳವು ಮಾಡಿದ್ದ ಎನ್ನಲಾಗಿದೆ.
ಕಾರ್ಯಾಚರಿಸಿದ ತಂಡ ಈ ಎಲ್ಲ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಠಾಣಾ ಇನ್‌ಸ್ಪೆಕ್ಟರ್ ವಿವೇಕಾನಂದ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಠಾಣಾ ಪಿಎಸ್‌ಐಗಳಾದ ಅವಿನಾಶ್, ಕಲೈಮಾರ್, ಸಿಬಂದಿ ರಾಜೇಶ್, ಇರ್ಷಾದ್, ಗಣೇಶ್ ಹಾಗೂ ಪ್ರವೀಣ್ ಭಾಗವಹಿಸಿದ್ದರು.