Advertisement

ಬಂಟ್ವಾಳ: ನಗರದಲ್ಲಿ ನೀರು ಪೂರೈಕೆಯದೇ ಸಮಸ್ಯೆ

12:50 AM Jan 28, 2019 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ನೀರಿನ ತೊಂದರೆ ಸದ್ಯಕ್ಕಿಲ್ಲ; ಆದರೆ ನಗರ ಭಾಗದಲ್ಲಿ ಕೊಂಚ ಸಮಸ್ಯೆ ಇದೆ ಎಂದು ಹೇಳುತ್ತಾರೆ ಅಧಿಕಾರಿಗಳು. ನಗರದಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಕಾಮಗಾರಿ ಪೂರ್ಣವಾಗದೇ ಇರುವುದು ಅಲ್ಲಲ್ಲಿ ತೊಂದರೆ  ಎದುರಾಗಲು ಕಾರಣ.

Advertisement

ಗ್ರಾಮೀಣ ಭಾಗದಲ್ಲಿ ಕೊಳವೆಬಾವಿ ಹಾಗೂ ತೆರೆದ ಬಾವಿಗಳೇ ಜಲಮೂಲವಾದರೂ ತಾಲೂಕಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡರೆ  ಇಡೀ ತಾಲೂಕಿನ ಗ್ರಾಮೀಣ ಭಾಗಗಳ ನೀರಿನ ಬವಣೆ ನೀಗಲಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಕಳೆದ ಸರಕಾರದ ಅವಧಿಯಲ್ಲಿ ಜಕ್ರಿಬೆಟ್ಟಿನಲ್ಲಿ ಉದ್ಘಾಟನೆಗೊಂಡ ನೀರು ಪೂರೈಕೆ ಘಟಕ ಹಾಗೂ ಬಂಟ್ವಾಳದಲ್ಲಿರುವ ಹಿಂದಿನ ಘಟಕದಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು, ಕೆಯುಡಬುÉ Â ಯವರ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಪೂರೈಕೆಯಲ್ಲಿ 
ವ್ಯತ್ಯಯ ವಾಗುತ್ತದೆ. ಒಂದು ಕಡೆ ಪೈಪ್‌ ಒಡೆದು ಹೋದರೆ ದುರಸ್ತಿಗೆ ಮೂರ್‍ನಾಲ್ಕು ದಿನಗಳೇ ಬೇಕಾಗುತ್ತವೆ ಎಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ಹೇಳುತ್ತಾರೆ.

ಐದು ಶಾಶ್ವತ ಯೋಜನೆಗಳು
ಹಿಂದೆ ಬಿ. ರಮಾನಾಥ ರೈ ಅವರು ಸಚಿವರಾಗಿದ್ದ ಸಂದರ್ಭ ಬಂಟ್ವಾಳ ತಾಲೂಕಿಗೆ ಒಟ್ಟು 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಮಂಜೂರಾಗಿದ್ದವು. ಅವುಗಳ ಎರಡು ಯೋಜನೆಗಳು ಪೂರ್ಣಗೊಂಡಿದ್ದು, ಮೂರರ ಕಾಮಗಾರಿ ಪ್ರಗತಿಯಲ್ಲಿದೆ.

ಕರೋಪಾಡಿಯಲ್ಲಿ 27.93 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಂಡ ಯೋಜನೆಯಿಂದ ಕರೋಪಾಡಿ ಸೇರಿದಂತೆ 79 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿದೆ. ಸಂಗಬೆಟ್ಟಿನಲ್ಲಿ 36.07 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಂಡ ಯೋಜನೆಯಲ್ಲಿ ಸಂಗಬೆಟ್ಟು ಸೇರಿದಂತೆ 65 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಯಾಗುತ್ತಿದೆ.

Advertisement

ಕೊರತೆಗೆ ಕಾರಣ
ಬೇಸಗೆಯ ಅವಧಿಯಲ್ಲಿ ಕೊಳವೆಬಾವಿಗಳಲ್ಲಿ ನೀರಿನ ಕೊರತೆ, ತೆರೆದ ಬಾವಿಗಳಲ್ಲೂ ನೀರಿನ ಕೊರತೆ, ಹೊಸ ಕೊಳವೆಬಾವಿಗಳಲ್ಲಿ ನೀರು ಇಲ್ಲದೇ ಇರುವುದು, ಮುಖ್ಯ ಪೈಪ್‌ ಒಡೆದು ಹೋಗುವ ಸಮಸ್ಯೆ, ವಿದ್ಯುತ್‌ ಕಡಿತ, ಮಳೆಕೊçಲು, ಜಲ ಮರುಪೂರಣಕ್ಕೆ ಗಂಭೀರ ಪ್ರಯತ್ನ ನಡೆದಿಲ್ಲ.

25 ಲಕ್ಷ ರೂ. ಅನುದಾನ
ಪ್ರಸ್ತುತ ದಿನಗಳಲ್ಲಿ ನೀರಿನ ಕೊರತೆಯ ಗಂಭೀರ ಸಮಸ್ಯೆಯಿಲ್ಲ. ಕೊಳವೆಬಾವಿಗಳಿಗೆ ಬೇಡಿಕೆ ಬಂದಿದ್ದು, ಅವುಗಳನ್ನು ಕೊರೆಯುವ ಕೆಲಸಗಳು ಆರಂಭಗೊಂಡಿವೆ. ಕುಡಿಯುವ ನೀರು ಪೂರೈಕೆಗಾಗಿ ಟಾಸ್ಕ್
ಪೋರ್ಸ್‌ನಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 25 ಲಕ್ಷ ರೂ.ಬಂದಿದ್ದು, ಅದನ್ನು ಸಂಬಂಧಪಟ್ಟವರ ನಿರ್ದೇಶನದಂತೆ ಹಂಚಿಕೆ ಮಾಡುವ ಕೆಲಸ ಮಾಡಲಾಗುತ್ತದೆ. ನೀರಿನ ಗಂಭೀರ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯತ್‌ ಕಾರ್ಯನಿರ್ವಹಿಸಲಿದೆ.
- ರಾಜಣ್ಣ, ಇಒ, ಬಂಟ್ವಾಳ ತಾ.ಪಂ

Advertisement

Udayavani is now on Telegram. Click here to join our channel and stay updated with the latest news.

Next