Advertisement
ಸಮಗ್ರ ಇಂಧನ ಅಭಿವೃದ್ಧಿ ಯೋಜನೆ ಮೂಲಕ ಮಂಜೂರಾದ ಸೋಲಾರ್ ಘಟಕಗಳನ್ನು ಮೆಸ್ಕಾಂ ನೋಡಲ್ ಏಜೆನ್ಸಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಮಾಡುತ್ತಿದ್ದು, ಈ ಘಟಕಗಳಲ್ಲಿ ತಯಾರಾದ ವಿದ್ಯುತ್ ನೇರವಾಗಿ ಮೆಸ್ಕಾಂನ ಗ್ರಿಡ್‌ಗಳಿಗೆ ಪೂರೈಕೆಯಾಗುತ್ತದೆ.
ಬಂಟ್ವಾಳದಲ್ಲಿ ಮೆಸ್ಕಾಂನ ಬಂಟ್ವಾಳ-1 ಮತ್ತು 2ರ ಉಪವಿಭಾಗದ ಮೂಲಕ ಒಟ್ಟು 6 ಸೋಲಾರ್ ಘಟಕ ಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಂಟ್ವಾಳ-1ರ ವ್ಯಾಪ್ತಿಯಲ್ಲಿ ಬಿ.ಸಿ. ರೋಡ್‌ನಲ್ಲಿರುವ ತಾ.ಪಂ. ಕಚೇರಿ ಕಟ್ಟಡದಲ್ಲಿ 24.32 ಕೆಡಬ್ಲ್ಯುಎಚ್( ಕಿಲೋ ವ್ಯಾಟ್/ಹವರ್) ಸಾಮರ್ಥ್ಯದ ಘಟಕವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪೂರ್ತಿಗೊಳಿಸಲಾಗಿದೆ.
Related Articles
Advertisement
ಬಂಟ್ವಾಳ-1ರ ವ್ಯಾಪ್ತಿಯ ಬಿ.ಸಿ. ರೋಡ್‌ನ ಕೋರ್ಟ್ ಕಟ್ಟಡದಲ್ಲಿ 30 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕ ಕಳೆದ ವರ್ಷ ಡಿಸೆಂಬರ್, 10.22 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕ ಕಳೆದ ವರ್ಷ ನವೆಂಬರ್‌ನಲ್ಲಿ ಕಾರ್ಯಾರಂಭಗೊಂಡಿದೆ. ಬಿ.ಸಿ. ರೋಡ್‌ನ ಮಿನಿ ವಿಧಾನಸೌಧದಲ್ಲಿ ಕೊನೆಯದಾಗಿ ಕಳೆದ ಜುಲೈ ಅಂತ್ಯಕ್ಕೆ 10.24 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕವು ಕಾರ್ಯಾರಂಭಗೊಂಡಿದೆ.
ಹೈಬ್ರಿಡ್ ಸಿಸ್ಟಂಗೆ ಬೇಡಿಕೆಸರಕಾರಿ ಕಟ್ಟಡಗಳಲ್ಲಿ ಸೋಲಾರ್ ಘಟಕಗಳು ಕಾರ್ಯಾರಂಭಗೊಂಡಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಸೋಲಾರ್ ಸಂಪರ್ಕವೂ ಕಡಿತಗೊಳ್ಳುತ್ತದೆ. ಅಂದರೆ ಈ ಯೋಜನೆಯ ಘಟಕಗಳಲ್ಲಿ ಅದೇ ರೀತಿಯ ವ್ಯವಸ್ಥೆ ಇರುತ್ತದೆ. ಪ್ರಮುಖವಾಗಿ ಮಿನಿ ವಿಧಾನಸೌಧದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಲೂ ಕಾರ್ಯಾಚರಿಸುವ ಬ್ಯಾಟರಿ ಸೌಕರ್ಯ ಇರುವ ಹೈಬ್ರಿಡ್ ವ್ಯವಸ್ಥೆಗೆ ಬೇಡಿಕೆ ಇದೆ. ವಿದ್ಯುತ್ ಪೂರೈಕೆ ಕಡಿತಗೊಂಡಾಗ ಜನರೇಟರ್ ಅನಿವಾರ್ಯ ವಾಗಿದ್ದು, ಅದಕ್ಕೆ ಡೀಸೆಲ್ ಹಾಕುವ ಬದಲು ಸೋಲಾರ್ ವ್ಯವಸ್ಥೆ ಇದ್ದರೆ ಅನುಕೂಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಯೋಜನೆಯಲ್ಲಿ ಆ ರೀತಿ ಮಾಡುವುದಕ್ಕೆ ಅವಕಾಶವಿಲ್ಲ. ಬ್ಯಾಟರಿ ಅಳವಡಿಸಿ ಪ್ರಯತ್ನಿಸಬಹುದು ಎಂದು ಮೆಸ್ಕಾಂ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ. ಮೆಸ್ಕಾಂ ಗ್ರಿಡ್‌ಗೆ ಪೂರೈಕೆ
ಬಂಟ್ವಾಳ ವಿಭಾಗ ವ್ಯಾಪ್ತಿ ಯಲ್ಲಿ ಒಟ್ಟು 142.80 ಲಕ್ಷ ರೂ. ವೆಚ್ಚದಲ್ಲಿ 8 ಸೋಲಾರ್ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ 6 ಘಟಕಗಳು ಬಂಟ್ವಾಳ ತಾ|ನ ಸರಕಾರಿ ಕಟ್ಟಡಗಳ ಛಾವಣಿಗಳಲ್ಲಿ ಅನುಷ್ಠಾನಗೊಳಿಸಿದ್ದು, ಕಾರ್ಯಾರಂಭ ಗೊಂಡಿವೆ. ಇಲ್ಲಿನ ವಿದ್ಯುತ್ ಮೆಸ್ಕಾಂ ಗ್ರಿಡ್‌ಗೆ ಪೂರೈಕೆಯಾಗುತ್ತದೆ.
- ರಾಮಚಂದ್ರ
ಎಕ್ಸಿಕ್ಯೂಟಿವ್ ಎಂಜಿನಿಯರ್, ಮೆಸ್ಕಾಂ ಬಂಟ್ವಾಳ ವಿಭಾಗ ಕಿರಣ್ ಸರಪಾಡಿ