ಸುಮಾರು 28 ವರ್ಷ ಹಳೆಯದಾದ ಅಂಗನವಾಡಿ ಕೇಂದ್ರ ಕಟ್ಟಡದ ಹೊರಭಾಗದಲ್ಲಿ ಸಿಮೆಂಟ್ ಶೀಟಿನ ಮೇಲ್ಛಾವಣಿ ನಿರ್ಮಿಸಲಾಗಿದ್ದು, ಅದರ ಒಂದು ಭಾಗ ಬುಧವಾರ ಬೆಳಗ್ಗೆ 10.30ರ ವೇಳೆಗೆ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ.
Advertisement
ಅಂಗನವಾಡಿ ಕೇಂದ್ರದಲ್ಲಿ ಸುಮಾರು 25 ಪುಟಾಣೆಗಳಿದ್ದು, ಎಲ್ಲರೂ ಕೇಂದ್ರದ ಒಳಗಿದ್ದ ಕಾರಣ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮೇಲ್ಛಾವಣಿ ಬೀಳುವ ಶಬ್ದ ಕೇಳುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆಯರು ಪುಟಾಣಿಗಳನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಘಟನಾ ಸ್ಥಳಕ್ಕೆ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಗ್ರಾ.ಪಂ.ಸದಸ್ಯ ದೇವಪ್ಪ ಕರ್ಕೇರ ಮೊದಲಾದವರು ತೆರಳಿ ಪರಿಶೀಲನೆ ನಡೆಸಿದ್ದಾರೆ.