Advertisement

ಬಂಟ್ವಾಳ ಪುರಸಭೆ: ಧರಣಿ ಹಿಂಪಡೆದ ಬಿಜೆಪಿ ಸದಸ್ಯರು

02:16 PM Apr 28, 2017 | Team Udayavani |

ಬಂಟ್ವಾಳ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಎ.27ರಂದು ಬೆಳಗ್ಗಿನಿಂದ ಧರಣಿ ಕುಳಿತಿದ್ದ ಸದಸ್ಯರಿಗೆ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಸನ್ನ ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖೀತ ಭರವಸೆ ನೀಡಿದ್ದರಿಂದ ಧರಣಿ ನಿರತ ಬಿಜೆಪಿ ಸದಸ್ಯರು ಸಂಜೆ 7 ಗಂಟೆ ಸುಮಾರಿಗೆ ಸದನ ಬಾವಿಯಿಂದ ಹೊರ ನಡೆದರು.

Advertisement

ಮಫತ್‌ಲಾಲ್‌ ಉದ್ಯಾನವನ ನಿರ್ಮಾಣ ಬಾಕಿ ಹಣ ಪಾವತಿಗೆ ತಡೆ, ಟೆಂಡರ್‌ ಕರೆಯದೆ ನಿರ್ಮಿಸಿರುವ ರಸ್ತೆ ಉಳಿಕೆ ಬಿಲ್‌ ಪಾವತಿ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಅಲ್ಲದೆ ಇತರ ಕೆಲವು ವಿಷಯಗಳು ಲೋಕಾಯುಕ್ತ ತನಿಖೆಯಲ್ಲಿ ಇರುವುದರಿಂದ ಅದರ ಬಗ್ಗೆ ಏನನ್ನೂ ಹೇಳಲಾಗದು ಎಂದರು.

ಸಭೆಯಲ್ಲಿ ವಿಪಕ್ಷ ಸದಸ್ಯರಿಗೆ ಆಗುತ್ತಿರುವ ಅವಮಾನ ಸಹಿಸಲು ಸಾಧ್ಯವಾಗುವುದಿಲ್ಲ. ತೀರಾ ಬೇಸತ್ತು ಧರಣಿ ನಡೆ
ಸಿದ್ದೇವೆ. ವಿಪಕ್ಷ ಸದಸ್ಯರು ಧರಣಿ ನಡೆಸುವಾಗ ಸದನದಲ್ಲಿ ಸಭೆ ಮುಂದುವರಿಯುವಂತಿಲ್ಲ ಎಂದು ತಿಳಿದೂ ಮತ್ತೆ ಸಭೆ ನಡೆಸಿ ನಿರ್ಣಯ ಮಾಡಿದ್ದಾರೆ. ಅಂತಹ ನಿರ್ಣಯ ಸಿಂಧುವೇ ಎಂದು ಗೋವಿಂದ ಪ್ರಭು ಪ್ರಶ್ನಿಸಿದರು.

ಅಧ್ಯಕ್ಷರಿಗೆ ನಿರ್ಣಯವನ್ನು ಮಾಡುವುದಕ್ಕೆ ಪರಮಾಧಿಕಾರ ಇದೆ. ಆದರೆ ನಿಯಮಾನುಸಾರ ಮಾಡಬೇಕು. ಅದರ ಹೊರತುಪಡಿಸಿದ ನಿರ್ಣಯಗಳಿಗೆ ಅಂಗೀಕಾರ ಇಲ್ಲ ಎನ್ನುವ ಅಭಿಪ್ರಾಯವನ್ನು ನಿರ್ದೇಶಕರು ನೀಡಿದರು. ನಿರ್ದೇಶಕರು ನೀಡಿದ ಪ್ರತಿ ಅಸ್ಪಷ್ಟವಾಗಿದ್ದರಿಂದ ಅಲ್ಲಿದ್ದವರಿಗೆ ಅರ್ಥವಾಗದೆ ಕೊನೆಗೆ ಮುಖ್ಯಾಧಿಕಾರಿ ಆ ಬಗ್ಗೆ ವಿವರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆ ಬಳಿಕ ಧರಣಿ ನಿರತರು ಅಲ್ಲಿಂದ ತೆರಳಿದರು.

ಮುಖ್ಯಮಂತ್ರಿಗಳು ಬಂದಾಗ ಪ್ರತಿಭಟನೆ
ಪುರಸಭೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಪಟ್ಟಿ ಮಾಡಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅವರು ಬಂಟ್ವಾಳಕ್ಕೆ ಬರುವ ಸಂದರ್ಭ ಧರಣಿ ಪ್ರತಿಭಟನೆ ನಡೆಸುವುದಾಗಿ ಗೋವಿಂದ ಪ್ರಭು ಧರಣಿ ಸ್ಥಳದಿಂದ ಹೊರ ನಡೆಯುವ ಸಂದರ್ಭ ಘೋಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next