Advertisement
ಬಂಟ್ವಾಳ ಪುರಸಭೆ ಯಲ್ಲಿ ಕಳೆದ ಎರಡೂ ವರೆ ವರ್ಷಗಳಿಂದ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದ ರೇಖಾ ಜೆ. ಶೆಟ್ಟಿ ಅವರು ಕಾರ್ಕಳಕ್ಕೆ ವರ್ಗಾವಣೆಗೊಂಡು, ಸೆ. 26ರಂದು ಬಂಟ್ವಾಳ ಪುರಸಭೆಯಿಂದ ನಿರ್ಗಮಿಸಿದ್ದಾರೆ. ಅವರು ನಿರ್ಗಮಿಸುವ ಸಂದರ್ಭದಲ್ಲಿ ಪುರಸಭೆಯ ವ್ಯವಸ್ಥಾಪಕಿ ಲೀಲಾವತಿಯವರಿಗೆ ಚಾರ್ಜ್ ನೀಡಿದ್ದು, ಬೇರೆಡೆಯಿಂದ ಯಾರೂ ಪ್ರಭಾರ ನೆಲೆಯಲ್ಲಿಯೂ . ಆಗಮಿಸಿಲ್ಲ.
Related Articles
Advertisement
ಹೊಸ ಮುಖ್ಯಾಧಿಕಾರಿಯವರು ಬರುವವರೆಗೆ ಹಿಂದಿನವರನ್ನೇ ನಿಲ್ಲಿಸುವ ಕುರಿತು ಮನವಿ ಮಾಡಲಾಗಿತ್ತಾದರೂ ಒತ್ತಡ ಬರುತ್ತದೆ ಎಂಬ ಕಾರಣಕ್ಕೆ ಅವರು ಬೇರೆಯವರಿಗೆ ಚಾರ್ಜ್ ನೀಡಿ ತೆರಳಿದ್ದಾರೆ. ರೇಖಾ ಶೆಟ್ಟಿ ಅವರು ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಕಾರ್ಕಳ ಪುರಸಭೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಹೀಗಾಗಿ ಮತ್ತೆ ಅವರನ್ನು ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಎರಡೂ ಕಡೆ ರೇಖಾ ಶೆಟ್ಟಿ!ಬಂಟ್ವಾಳದ ಹಿಂದಿನ ಮುಖ್ಯಾಧಿಕಾರಿ ಕಾರ್ಕಳಕ್ಕೆ ವರ್ಗಾವಣೆಗೊಂಡು ತೆರಳಿದ್ದರೂ ಬಂಟ್ವಾಳ ಹಾಗೂ ಕಾರ್ಕಳ ಪುರಸಭೆಗಳ ವೆಬ್‌ಸೈಟ್‌ಗಳಲ್ಲಿ ಮಾತ್ರ ರೇಖಾ ಜೆ. ಶೆಟ್ಟಿ ಅವರೇ ಮುಖ್ಯಾಧಿಕಾರಿ ಆಗಿದ್ದಾರೆ. ಇದೂ ಗೊಂದಲಕ್ಕೆ ಕಾರಣವಾಗಲಿದೆ. ಅ. 20ರ ಬಳಿಕ ಬರುತ್ತಾರೆ?
ಪುರಸಭೆಯ ಮೂಲಗಳ ಪ್ರಕಾರ ನೂತನ ಮುಖ್ಯಾಧಿಕಾರಿಯವರು ಅ. 20ರ ಬಳಿಕ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಆದರೆ ಇದು ಖಚಿತ ಮಾಹಿತಿಯಲ್ಲ. ಪ್ರಸ್ತುತ ಹಿಂದಿನ ಮುಖ್ಯಾಧಿಕಾರಿ ನಿರ್ಗಮಿಸಿ 10 ದಿನಗಳು ಕಳೆದಿದ್ದು, ಬೇರೆ ಮುಖ್ಯಾಧಿಕಾರಿ ಆಗಮಿಸಲು ಹೆಚ್ಚಿನ ಅಂತರ ಇದ್ದಾಗ ಬೇರೆ ಅಧಿಕಾರಿಗಳನ್ನು ಪ್ರಭಾರ ನೆಲೆಯಲ್ಲಿ ನೇಮಿಸಲಾಗುತ್ತದೆ. ನಮ್ಮ ಗಮನಕ್ಕೆ ಬಂದಿಲ್ಲ
ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿ ಯವರ ನೇಮಕ ವಿಚಾರ ಸರಕಾರಿ ಮಟ್ಟ ದಲ್ಲಿ ನಡೆಯುವ ಪ್ರಕ್ರಿಯೆ. ಹೀಗಾಗಿ ಅದರ ಕುರಿತು ನಮ್ಮ ಗಮನಕ್ಕೆ ಯಾವುದೇ ವಿಚಾರ ಬಂದಿಲ್ಲ.
ಡಾ| ಜಿ. ಸಂತೋಷ್‌ಕುಮಾರ್, ಪ್ರಭಾರ ಯೋಜನ ನಿರ್ದೇಶಕರು, ದ.ಕ. ಚಾರ್ಜ್ ನೀಡಿದ್ದಾರೆ
ಪ್ರಸ್ತುತ ಹಿಂದಿನ ಮುಖ್ಯಾಧಿಕಾರಿಯವರು ನನಗೆ ಚಾರ್ಜ್ ನೀಡಿ ಹೋಗಿದ್ದಾರೆ. ಹೊಸ ಮುಖ್ಯಾಧಿಕಾರಿಯವರು ಆಗಮಿಸುವ ಕುರಿತು ನಮಗೆ ಮಾಹಿತಿಯಿಲ್ಲ. ಆದರೆ ಚೆಕ್ಕಿನ ವ್ಯವಹಾರಗಳನ್ನು ಬೇರೆ ಮುಖ್ಯಾಧಿಕಾರಿಯವರೇ ಮಾಡಬೇಕಾಗುತ್ತದೆ.
– ಲೀಲಾವತಿ, ವ್ಯವಸ್ಥಾಪಕಿ, ಬಂಟ್ವಾಳ ಪುರಸಭೆ - ಕಿರಣ್ ಸರಪಾಡಿ