Advertisement

Bantwal; ಧಾರ್ಮಿಕ ಕೇಂದ್ರಗಳು, ಶಿಶುಮಂದಿರದಿಂದ ಸಾವಿರಾರು ರೂ. ಕಳವು

09:11 PM Jun 24, 2024 | Team Udayavani |

ಬಂಟ್ವಾಳ: ಎರಡು ಗ್ರಾಮಗಳ ಎರಡು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ಕಳ್ಳರು ನುಗ್ಗಿ ಸಾವಿರಾರು ರೂ. ನಗದು ಕಳವು ಮಾಡಿದ ಘಟನೆ ಆದಿತ್ಯವಾರ ಮಧ್ಯ ರಾತ್ರಿ ವೇಳೆ ನಡೆದಿದೆ.

Advertisement

ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ ರಾಮ ಭಜನಾ ಮಂದಿರದ ಮುಂಬಾಗಿಲು ಮುರಿದು ಮಂದಿರದೊಳಗೆ ಇದ್ಧ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 3000 ಸಾವಿರ ನಗದನ್ನು ಕಳವು ಮಾಡಿದ್ದಾರೆ. ಮತ್ತು ಗೊದ್ರೇಜ್ ನ ಬಾಗಿಲು ಮುರಿದು ಅದರೊಳಗೆ ಇದ್ದ ಅಗತ್ಯವಾದ ಪತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಹೋಗಿದ್ದಾರೆ.

ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದೊಳಗೆ ನುಗ್ಗಿದ ಕಳ್ಳರು ಅದರಲ್ಲಿದ್ದ ಡಬ್ಬಿಯನ್ನು ಮುರಿದು ಸುಮಾರು 600 ರೂ ನಗದನ್ನು ದೋಚಿದ್ದಾರೆ.

ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಸಾಲ್ಯಾನ್ ಕುಟುಂಬದ ತರವಾಡು ದೇವಸ್ಥಾನ ಇದ್ದು ಅದರ ಬಾಗಿಲು ಮುರಿದು ಒಳಪ್ರವೇಶ ಮಾಡಿದ ಕಳ್ಳರು ಕಾಣಿಕೆ ಡಬ್ಬಿಯನ್ನು‌ಪುಡಿಗೈದು ಅದರಲ್ಲಿದ್ದ ಸುಮಾರು 1000 ಸಾವಿರ ನಗದು ಕಳವು ಮಾಡಿದ್ದಾರೆ.

ಬಾಳ್ತಿಲ ಗ್ರಾಮದ ಸುಧೆಕ್ಕಾರು ಎಂಬಲ್ಲಿರುವ ರಕ್ತೇಶ್ವರಿ ಗುಳಿಗ ನ ಗರ್ಭಗುಡಿಯ ಬಾಗಿಲ ಚಿಲಕ ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಗರ್ಭಗುಡಿಯೊಳಗಿನ ವಸ್ತುಗಳನ್ನು ‌ಚೆಲ್ಲಾಪಿಲ್ಲಿ ಮಾಡಿದ್ದಲ್ಲದೆ, ಕಾಣಿಕೆ ಡಬ್ಬಿ ಒಡೆದು ಹಾಕಿ ಅದರಲ್ಲಿದ್ದ ಹಣ ಮತ್ತು ಭಜನೆಯಿಂದ ಹೊಂದಾಣಿಕೆ ಗೊಂಡ ಒಟ್ಟು 10,000 ನಗದನ್ನು ಕಳ್ಳರು ಎಗರಿಸಿದ್ದಾರೆ.

Advertisement

ಮೂರು ಪ್ರಕರಣಗಳ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.

ಪಾಣೆಮಂಗಳೂರು ಮತ್ತು ಕೈಕಂಬ ಭಾಗದಲ್ಲಿ ಕಳೆದ ಒಂದು ವಾರಗಳಿಂದ ಕಳ್ಳತನ ನಡೆಯುತ್ತಿದ್ದು, ಪೋಲೀಸರ ತಲೆಕೆಡಿಸಿದೆ.ಮಳೆಗಾಲದಲ್ಲಿ ಜೋರಾಗಿ ಮಳೆ ಬರುವ ದಿನಗಳಲ್ಲಿ ಪೇಟೆ ಅಂಗಡಿಗಳ ಹಾಗೂ ಮನೆಗಳ ಕಳ್ಳತನ ಪ್ರತಿ ವರ್ಷ ವರದಿಯಾಗುತ್ತಿದೆ. ಇದೀಗ ಮತ್ತೆ ಈ ವರ್ಷದಲ್ಲಿ ಕಳ್ಳರ ಆಟ ಶುರುವಾಗಿದ್ದು, ಪೊಲೀಸರ ನಿದ್ಧೆಕೆಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next