ಬಂಟ್ವಾಳ: ತೋಟದಲ್ಲಿದ್ದ ದನವೊಂದನ್ನು ರಾತ್ರಿ ವೇಳೆ ಚಿರತೆ ದಾಳಿ ನಡೆಸಿ ಕೊಂದ ಘಟನೆ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಎಂಬಲ್ಲಿ ನಡೆದಿದೆ.
ಕೇಲ್ದೊಡಿ ನಿವಾಸಿ ಶೀನಪ್ಪ ಪೂಜಾರಿ ಅವರ ತೋಟದಲ್ಲಿದ್ದ ದನವನ್ನು ಭಾಗಶಃ ತಿಂದು ಹಾಕಿದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ತೋಟಕ್ಕೆ ಎರಡು ದನಗಳನ್ನು ಮೇಯಲು ಬಿಟ್ಟಿದ್ದು, ಒಂದು ಸಂಜೆ ಮನೆಗೆ ಬಂದಿರಲಿಲ್ಲ.ಅದು ತೋಟದಲ್ಲಿಯೇ ಮಲಗಿದ್ದು,ಮತ್ತೊಂದು ದನ ಮನೆಯಲ್ಲಿತ್ತು.ಬೆಳಗ್ಗೆ ಎದ್ದು ನೋಡುವಾಗ ತೋಟದಲ್ಲಿ ಮಲಗಿದ್ದ ದನ ನಾಪತ್ತೆಯಾಗಿತ್ತು.ಹಾಗಾಗಿ ಮನೆಯವರು ಹುಡುಕಿದಾಗ ತೋಟದ ಒಂದು ಮೂಲೆಯಲ್ಲಿ ಅರ್ಧ ದನದ ಕಳೇಬರ ಪತ್ತೆಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು,ಸ್ಥಳೀಯ ಪಶು ವೈದ್ಯಾಧಿಕಾರಿ ಅವಿನಾಶ್ ಭಟ್ ಹಾಗೂ ಸ್ಥಳೀಯ ಗ್ರಾ.ಪಂ.ಲಕ್ಷಣ್ ಅವರು ಬೇಟಿ ನೀಡಿದ್ದಾರೆ.
Related Articles
ಪಶುವೈದ್ಯ ಅವಿನಾಶ್ ಅವರು ಪ್ರಾಥಮಿಕ ಪರೀಕ್ಷೆ ನಡೆಸಿದ ಬಳಿಕ ದನವನ್ನು ಹೂಳುವ ಕೆಲಸ ಮಾಡಲಾಯಿತು.
ಈ ಹಿಂದೆ ಅನೇಕ ಬಾರಿ ಚಿರತೆ ಈ ಭಾಗದಲ್ಲಿ ಕಾಣಿಸಿಕೊಂಡಿದ್ದು, ಚಿರತೆಯನ್ನು ಹಿಡಿದು ಗ್ರಾಮಸ್ಥರಿಗಾಗುವ ತೊಂದರೆಯನ್ನು ತಪ್ಪಿಸುವಂತೆ ಗ್ರಾಮಸ್ಥರು ಇಲಾಖೆಯವರಲ್ಲಿ ಮನವಿ ಮಾಡಿದ್ದಾರೆ.