Advertisement

ಬಂಟ್ವಾಳ: ಲಾರಿ  ಸಹಿತ ಅಕ್ರಮ ಮರ, ವಶಕ್ಕೆ

06:55 AM Feb 10, 2018 | |

ಬಂಟ್ವಾಳ: ಲಾರಿಯಲ್ಲಿ ಸಾಗಿಸುತ್ತಿದ್ದ ಅಕ್ರಮ ಮರದ ದಿಮ್ಮಿಗಳನ್ನು  ವಾಹನ ಸಹಿತ ಅರಣ್ಯ ಇಲಾಖೆ ಅಧಿಕಾರಿಗಳು ಬಂಟ್ವಾಳ ಬೈಪಾಸಿನಲ್ಲಿ ಫೆ. 8ರಂದು  ವಶಪಡಿಸಿಕೊಂಡಿದ್ದಾರೆ.

Advertisement

ಮರವನ್ನು ಬಿ.ಸಿ.ರೋಡ್‌ನಿಂದ ಬಂಟ್ವಾಳ ಕಡೆಗೆ  ಸಾಗಿಸಲಾಗುತ್ತಿತ್ತು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್‌ ಬಿ. ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು. ಲಾರಿ ಸಹಿತ ಮರದ ದಿಮ್ಮಿಗಳ ಮೌಲ್ಯ 6 ಲ. ರೂ. ಎಂದು ಅಂದಾಜಿಸಲಾಗಿದೆ.  ಚಾಲಕ  ಪರಾರಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಅನಿಲ ಕೆ. ಅರಣ್ಯ ರಕ್ಷಕ ಕ್ಯಾತಲಿಂಗ ಎಸ್‌.ಕೆ., ಮನೋಜ್‌  ಕುಮಾರ್‌, ಸ್ಮಿತಾ, ಅರಣ್ಯ ವೀಕ್ಷಕ ಡಿ. ಬಾಸ್ಕರ, ಮೋಹನದಾಸ, ಸುನೀಲ್‌, ಸುರೇಶ್‌, ವಾಹನ ಚಾಲಕ ಜಯರಾಮ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next