ಬಂಟ್ವಾಳ: ಇರಾ ಕುಕ್ಕಾಜೆಯ ಕಾಪಿಕಾಡಿನಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಯೋರ್ವಳಿಗೆ ಬೈಕ್ ಢಿಕ್ಕಿ ಹೊಡೆದು ಗಾಯಗೊಂಡಿರುವ ಘಟನೆ ಸೆ. 9ರಂದು ಸಂಭವಿಸಿದೆ.
ತಲಪಾಡಿ ನಿವಾಸಿ ಫಾತಿಮತ್ ನಾಸಿಫಾ ಗಾಯಗೊಂಡ ಬಾಲಕಿ.
ಬಾಲಕಿಯು ಅಜ್ಜಿಯ ಜತೆ ಆಟೋರಿಕ್ಷಾದಿಂದ ಇಳಿದು ಇಳಿದು ರಸ್ತೆ ದಾಟುತ್ತಿದ್ದ ವೇಳೆ ಸವಾರ ಅಬ್ದುಲ್ ರಝಾಕ್ ನಿರ್ಲಕ್ಷತನದಿಂದ ಬೈಕ್ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದಿದ್ದಾನೆ ಎಂದು ಬಾಲಕಿಯ ತಂದೆ ನೌಫಲ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯಿಂದ ಬಾಲಕಿ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.