ಬಂಟ್ವಾಳ: ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಆ. 4ರ ಸಂಜೆ ನಡೆದ ಎರಡು ತಂಡಗಳ ಹೊಡೆದಾಟ ಹಾಗೂ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಅಶ್ವಥ್, ಶರಣ್ ಹಾಗೂ ವಸಂತ ಬಂಧಿತರು. ಉಳಿದ ಆರೋಪಿಗಳಿಗಾಗಿ ಬಂಟ್ವಾಳ ನಗರ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಆರೋಪಿಗಳಿಂದ ಹಲ್ಲೆ ಹಾಗೂ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡಿರುವ ಹರೀಶ ಪೂಜಾರಿ, ವಿನೀತ್ ಹಾಗೂ ಪೃಥ್ವಿರಾಜ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ವಿವರ:
ಹರೀಶ್ ಪೂಜಾರಿ ಅವರು ಬೈಪಾಸ್ ಜಂಕ್ಷನ್‌ನಲ್ಲಿದ್ದಾಗ ಪರಿಚಿತ ಆರೋಪಿಗಳು ಎರಡು ಕಾರು ಹಾಗೂ ಬೈಕಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವೇಳೆ ಅಕ್ಷೇಪಿಸಿದಾಗ ಹಲ್ಲೆ ನಡೆಸಿದ್ದಾರೆ. ಹರೀಶ್ ಅವರ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ನೇಹಿತರಾದ ಕೀರ್ತನ್, ಪೃಥ್ವಿರಾಜ್ ಹಾಗೂ ವಿನೀತ್ ಅವರು ಓಡಿ ಬಂದು ಹಲ್ಲೆ ತಡೆಯಲು ಮುಂದಾಗಿದ್ದು, ಆರೋಪಿಗಳು ಅವರಿಗೂ ಹಲ್ಲೆ ನಡೆಸಿದ್ದಾರೆ.
ಆರೋಪಿಗಳ ಪೈಕಿ ಅಶ್ವತ್ ಎಂಬಾತ ವಿನೀತ್‌ನಿಗೆ ಹಾಗೂ ಮತ್ತೋರ್ವ ಆರೋಪಿ ಶರಣ್ ಎಂಬಾತ ಪೃಥ್ವಿರಾಜ್‌ನಿಗೆ ತಿವಿದಿದ್ದಾನೆ. ಈ ವೇಳೆ ಸಾರ್ವಜನಿಕರು ಹಾಗೂ ಪರಿಚಿತರು ಸೇರಿದನ್ನು ನೊಡಿದ ಆರೋಪಿಗಳು ಹಲ್ಲೆ ನಡೆಸಿದ ಚೂರಿಗಳೊಂದಿಗೆ ಅವರು ಬಂದಿದ್ದ ವಾಹನಗಳಲ್ಲಿ ಪರಾರಿಯಾಗಿದ್ದರು. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.