Advertisement

Bantwal ಮಾದಕ ವಸ್ತು ಸೇವಿಸಿ ಅಸಭ್ಯ ವರ್ತನೆ: ಮೂವರು ವಶಕ್ಕೆ

12:11 AM Jan 04, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡಿನ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯ ವರ್ತನೆ ತೋರುತ್ತಿದ್ದ ಮೂವರನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಪರ್ಲಿಯಾ ನಿವಾಸಿ ನವಾಝ್ ಯಾನೆ ಬೀಡಿ ನವಾಝ್, ನಂದರ ಬೆಟ್ಟು ನಿವಾಸಿ ಆರಿಸ್‌ ಯಾನೆ ಆಜಾದ್‌ ಹಾಗೂ ಮೊಹಮ್ಮದ್‌ ಜಸೀಂ ಅವರನ್ನು ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಆರೋಪಿಗಳು ಬಿ.ಸಿ.ರೋಡಿನ ಸರ್ಕಲ್‌ ಬಳಿಕ ಯಾವುದೋ ವಸ್ತುಗಳನ್ನು ಹಿಡಿದುಕೊಂಡು ರಂಪಾಟ ಮಾಡಿರುವ ಜತೆಗೆ ಬಸ್‌ ನಿಲ್ದಾಣದಲ್ಲಿ ಕಾರೊಂದರ ಗಾಜು ಪುಡಿಗೈದು ಗೊಂದಲ ಸೃಷ್ಟಿಸಿದ್ದರು. ಜತೆಗೆ ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ ರೈಡ್‌ ಮಾಡಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಕೂಡ ಚಾಲನೆ ಮಾಡಿದ್ದರು. ಬಸ್ತಿಪಡ್ಪು ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಿರಿಕಿರಿ ಮಾಡುತ್ತಿದ್ದ ಸಂದರ್ಭ ಮೂವರನ್ನು ವಶಕ್ಕೆ ಪಡೆದಿದ್ದಾರೆ.ಅವರ ವಿರುದ್ಧ ಸುಮೋಟೋ ಆ್ಯಕ್ಟ್ ನಡಿ ಪ್ರಕರಣ ದಾಖಲಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next