Advertisement

Bantwal:ಅಡ್ಡೂರು ಸೇತುವೆಯಲ್ಲಿ ಬಸ್‌ ಸಂಚಾರಕ್ಕೆ ಆಗ್ರಹ; ವರದಿ ಬಳಿಕ ನಿರ್ಧಾರ: ಸ್ಪಷ್ಟನೆ

11:56 PM Aug 20, 2024 | Team Udayavani |

ಬಂಟ್ವಾಳ: ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವ ಪೊಳಲಿ ಸಮೀಪದ ಅಡೂxರು ಸೇತುವೆಯಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಪರಿಶೀಲನ ಯಂತ್ರ (ಬ್ರಿಡ್ಜ್ ಇನ್‌ಸ್ಪೆಕ್ಷನ್‌ ಮೆಷಿನ್‌)ಆಗಮಿಸಿ ವರದಿ ನೀಡುವವರೆಗೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಈ ನಿರ್ಧಾರಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಮಂಗಳವಾರ ಸಂಜೆ ಅಡೂxರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಸ್ಪಷ್ಟಪಡಿಸಿದೆ.

Advertisement

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಆಯುಕ್ತ ಅನುಪಮ ಅಗರ್‌ವಾಲ್‌, ಸಹಾಯಕ ಕಮೀಷನರ್‌ ಹರ್ಷವರ್ಧನ ಪಿ.ಜೆ. ಅವರು ಸ್ಥಳೀಯ ಗ್ರಾ. ಪಂ. ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಬಸ್‌ಗಳು ಲಘು ವಾಹನವಾಗಿರುವುದರಿಂದ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದರು.

ಈ ವೇಳೆ ಅಧಿಕಾರಿಗಳು ಮಾತನಾಡಿ, ಪ್ರಸ್ತುತ 2.75 ಮೀ. ಎತ್ತರದವರೆಗೆ ವಾಹನ ಸಂಚಾರಕ್ಕೆ ಅವಕಾಶವಿದ್ದು, ಬಸ್ಸಿಗೆ ಬೇಕಾಗಿ 4.50 ಮೀ.ಗೆ ಏರಿಸಬೇಕಾಗುತ್ತದೆ. ಆಗ ಲಾರಿ ಸೇರಿದಂತೆ ಇತರ ಘನ ವಾಹನಗಳು ಕೂಡ ಸಂಚರಿಸುತ್ತದೆ. ಹಗಲು ಹೊತ್ತಿನಲ್ಲಿ ಕಾವಲು ಇದ್ದರೂ, ರಾತ್ರಿ ಕಾವಲು ಸಾಧ್ಯವಿಲ್ಲ ಎಂದರು.

ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುವುದು ಗಮನಕ್ಕೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸೇತುವೆ ಪರಿಶೀಲನ ಯಂತ್ರ ಬಂದು ವರದಿ ನೀಡಿದ ಬಳಿಕ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳುತ್ತದೆ ಎಂದರು. ದ.ಕ. ಡಿಸಿ ಮುಲ್ಲೈ ಮುಗಿಲನ್‌ ಆಗಮಿಸುತ್ತಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಸೇರಿದ್ದರು.

ಆ. 26: ಪರಿಶೀಲನ ಯಂತ್ರ ಆಗಮನ
ಸೇತುವೆ ಸಾಮರ್ಥ್ಯ ಪರಿಶೀಲನ ಯಂತ್ರವು ಆ. 26ರಂದು ಬೆಂಗಳೂರಿನಿಂದ ದ.ಕ.ಜಿಲ್ಲೆಗೆ ಆಗಮಿಸಿ ಇಲ್ಲಿನ ಸೇತುವೆಗಳ ಪರಿಶೀಲನ ಕಾರ್ಯ ಮಾಡಲಿದೆ. ಸುಮಾರು ಒಂದು ವಾರಗಳ ಕಾಲ ಜಿಲ್ಲೆಯಲ್ಲಿದ್ದು, ಅಪಾಯಕಾರಿಯಾಗಿರುವ ಎಲ್ಲ ಸೇತುವೆಗಳನ್ನೂ ಪರಿಶೀಲಿಸಲಿದೆ. ಸಾಮರ್ಥ್ಯ ಕಳೆದುಕೊಂಡಿರುವ ಸೇತುವೆಗಳನ್ನು ದುರಸ್ತಿ ಮಾಡಬಹುದೇ ಅಥವಾ ಹೊಸ ನಿರ್ಮಾಣ ಬೇಕೇ ಎಂಬುದರ ಕುರಿತು ವರದಿ ನೀಡಲಿದೆ. ಅದರ ಬಳಿಕ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆದು ಕಾಮಗಾರಿ ನಡೆಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next