Advertisement

ಬಂಟ್ವಾಡಿ –ಕೆಳಾಕಳಿ ಮಾರಿಕಾಂಬಾ ದೇವಿ ಜಾತ್ರೋತ್ಸವ

10:23 PM May 09, 2019 | Team Udayavani |

ಕುಂದಾಪುರ: ಹಕ್ಲಾಡಿ ಗ್ರಾಮದ ಕೆಳಾಕಳಿ – ಬಂಟ್ವಾಡಿಯಲ್ಲಿರುವ ಶ್ರೀ ಮಾರಿಕಾಂಬ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರಗಿತು.

Advertisement

ಮೇ 6ರಂದು ರಾತ್ರಿ ಶ್ರೀ ದೇವಿಯ ವೈಭವದ ಬೀಡಿಗೆ ಮೆರವಣಿಗೆ, ಮೇ 7ರಂದು ಬಲಿಪೂಜೆ, ಆ ಬಳಿಕ ಭಕ್ತಿ ಲಹರಿ, ಸಂಜೆ 5ಕ್ಕೆ ಭಜನೆ, ಬಂಟ್ವಾಡಿ ಶಾಲೆಯ “ಯಕ್ಷ ದೀವಿ’ಗೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನಗೊಂಡಿತು. ಮೇ 8ರಂದು ಬೆಳಗ್ಗೆ ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಬೇವಿನ ಸೊಪ್ಪಿನ ಸೇವೆ ಹಾಗೂ ಕಸ ಗುಡಿಸುವ ಸೇವೆ ಮುನ್ನ ಗದ್ದುಗೆ ಯಲ್ಲಿ ಪೂಜಿಸಲ್ಪಡುವ ದೇವಿಗೆ ಮಹಾ ಮಂಗಳಾರತಿ, ಆ ಬಳಿಕ ಗಣೇಶ್‌ ಗಂಗೊಳ್ಳಿ ಬಳಗದಿಂದ ಗಾನ ಲಹರಿ, ಸಂಜೆ ಶ್ರೀ ಪಾಂಚಜನ್ಯ ಮಹಿಳಾ ಭಜನ ಮಂಡಳಿ ದೊಡ್ಡ ಹಿತ್ಲು ಗಂಗೊಳ್ಳಿ ವತಿಯಿಂದ ಭಜನೆ ನಡೆಯಿತು.

ಗುರುವಾರ ಬೆಳಗ್ಗೆ ತುಲಾಭಾರ ಸೇವೆ, ಬಲಿ ಕಾರ್ಯಕ್ರಮ, ಸಂಜೆ ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿ ನಾಯಕವಾಡಿ ಹಾಗೂ ಶ್ರೀ ರಾಮ ಮಂದಿರ ಭಜನ ಮಂಡಳಿ ಕಂಚುಗೋಡು ಇವರಿಂದ ಭಜನೆ, ರಾತ್ರಿ ಮಾರಿ ಹೊಡೆಯುವುದು, ರಾತ್ರಿ 1ಕ್ಕೆ ಶ್ರೀ ದೇವಿಯ ವೈಭವದ ಪುರ ಪ್ರವೇಶ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next