Advertisement

ಎಎಫ್ಸಿ ಏಶ್ಯ ಕಪ್‌ ಫ‌ುಟ್‌ಬಾಲ್‌ ಗೆ ಬಂಟ್ವಾಳದ ನಿಖೀಲ್‌ ಪೂಜಾರಿ

11:23 AM Dec 15, 2018 | |

ಹೊಸದಿಲ್ಲಿ: ಜನವರಿಯಿಂದ ಯುಎಇ ಯಲ್ಲಿ ನಡೆಯಲಿರುವ “ಎಎಫ್ಸಿ ಏಶ್ಯ ಕಪ್‌ 2019′ ಫ‌ುಟ್‌ಬಾಲ್‌ ಕೂಟದ ಅಭ್ಯಾಸ ಶಿಬಿರಕ್ಕಾಗಿ ಭಾರತದ 34 ಆಟಗಾರರ ಸಂಭಾವ್ಯ ತಂಡ ಈಗಾಗಲೇ ಪ್ರಕಟಗೊಂಡಿದ್ದು, ಇದರಲ್ಲಿ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಮುರುವ ಮೂಲದ ಸ್ಟ್ರೈಕರ್‌ ನಿಖೀಲ್‌ ಪೂಜಾರಿ ಕೂಡ ಸೇರಿದ್ದಾರೆ.

Advertisement

ಚಂದ್ರಶೇಖರ ಪೂಜಾರಿ-ಮಮತಾ ದಂಪತಿಯ ಪುತ್ರನಾಗಿರುವ 23ರ ಹರೆಯದ ನಿಖೀಲ್‌ ಈಗಾಗಲೇ ಭಾರತವನ್ನು 6 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದು, ಒಂದು ಗೋಲು ಹೊಡೆದಿದ್ದಾರೆ. ನಿಖೀಲ್‌ ಬೆಳೆದದ್ದು, ವಿದ್ಯಾಭ್ಯಾಸ ನಡೆಸಿದ್ದು ಮುಂಬಯಿಯಲ್ಲಾದರೂ ತುಳುವನ್ನು ಮರೆತಿಲ್ಲ. ಸಹೋದರ ವಿನೀಲ್‌ ಕೂಡ ಫ‌ುಟ್‌ಬಾಲ್‌ ಲೀಗ್‌ಗಳಲ್ಲಿ ಮಿಂಚುತ್ತಿದ್ದಾರೆ.

ಕೇರಳ ಬ್ಲಾಸ್ಟರ್ ತಂಡ ಮಿಡ್‌ಫಿಲ್ಡರ್‌ ಶಾಹಲ್‌ ಅಬ್ದುಲ್‌ ಸಮದ್‌, ಭಾರತದ ಅಂಡರ್‌-17 ತಂಡದ ಮಾಜಿ ಆಟಗಾರ ಹಾಗೂ ಎಟಿಕೆ ತಂಡದಲ್ಲಿರುವ ಕೋಮಲ್‌ ಥಾಟಲ್‌ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಭಾರೀ ಬದಲಾವಣೆಯೇನೂ ಸಂಭವಿಸಿಲ್ಲ. ಸ್ಟಾರ್‌ ಸ್ಟ್ರೈಕರ್‌ ಸುನೀಲ್‌ ಚೇಟ್ರಿ, ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ಕೂಡ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next