Advertisement

ಬಂಟರ ಸಂಘ  ಅಂಧೇರಿ-ಬಾಂದ್ರಾ: ತಾಳಮದ್ದಳೆ

02:46 PM Aug 21, 2018 | Team Udayavani |

ಮುಂಬಯಿ: ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಸದಾ ಒಂದಿಲ್ಲೊಂದು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ಮುಂಚೂಣಿಯಲ್ಲಿದೆ. ಸಮಾಜ ಸೇವೆಯೇ ಮುಖ್ಯ ಉದ್ದೇಶವಾಗಿರುವ ಈ ಸಂಸ್ಥೆಯು ಕಲೆ, ಕಲಾವಿದರಿಗೂ ಪ್ರೋತ್ಸಾಹ ನೀಡುವ ನಿಟ್ಟಿನಿಂದ ಆ.  15 ರಂದು ಪೊವಾಯಿಯ ಎಸ್‌ಎಂ ಶೆಟ್ಟಿ  ಹೈಸ್ಕೂಲಿನ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಬಳಗದ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಳ ದಮಯಂತಿ ಯಕ್ಷಗಾನ ತಾಳಮದ್ದಳೆ  ನೆರವೇರಿತು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ದೇವಿ ಪ್ರಸಾದ್‌ ಆಳ್ವ, ತಲಪಾಡಿ, ಚೆಂಡೆಯಲ್ಲಿ ದಯಾನಂದ ಶೆಟ್ಟಿಗಾರ್‌ ಮಿಜಾರು, ಮದ್ದಳೆಯಲ್ಲಿ ಪ್ರಶಾಂತ ಶೆಟ್ಟಿ ವಗೆನಾಡು, ಅರ್ಥಧಾರಿಗಳಾಗಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್‌ ಶೆಟ್ಟಿ, ಪೆರ್ಮುದೆ, ಸದಾಶಿವ ಆಳ್ವ, ತಲಪಾಡಿ, ವೆಂಕಟೇಶ್‌ ಕುಮಾರ್‌, ಉಳುವಾಣ, ವಿಜಯಶಂಕರ ಆಳ್ವ, ಮಿತ್ತಳಿಕೆ ಇವರ ಅಪೂರ್ವ ಸಂಗಮದೊಂದಿಗೆ ಕಿಕ್ಕಿರಿದು ನೆರೆದ ಸಭಿಕರನ್ನು ತಮ್ಮ ವಾಕ್ಚಾತುರ್ಯದಿಂದ ರಂಜಿಸಿದರು. ದಿನೇಶ್‌ ಶೆಟ್ಟಿ ವಿಕ್ರೋಲಿ ಹಾಗೂ ದಯಾನಂದ ಬಂಗೇರ ಅವರು ಸಹಕರಿಸಿದರು.

ಇದೇ ಸಂದರ್ಭದಲ್ಲಿ ಬಂಟರ ಸಂಘದ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯವರು ಏರ್ಪಡಿಸಿದ್ದ ಮಹಿಳೆಯರ ಕಾಲ್ಚೆಂಡಾಟದಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಆಟಗಾರರನ್ನು ಗೌರವಿಸಲಾಯಿತು. ಹಸ್ತಾ ಶೆಟ್ಟಿ ಅವರು ಅತ್ತುÂತ್ತಮ ಆಟಗಾರ್ತಿಯಾಗಿ ಆಯ್ಕೆಯಾಗಿದ್ದು ಉಳಿದಂತೆ ಸಾಕ್ಷಿ ಶೆಟ್ಟಿ, ದ್ರಿûಾ ಶೆಟ್ಟಿ, ಸ್ವಾತಿ ಶೆಟ್ಟಿ ರಕ್ಷಿತಾ ಶೆಟ್ಟಿ, ಶೈವಿ  ಶೆಟ್ಟಿ, ದಿಶಾ ಶೆಟ್ಟಿ, ಸಮಾವಿತಾ  ಶೆಟ್ಟಿ ಹಾಗೂ ವೈಷ್ಣವಿ ಇವರ ಉತ್ತಮ ಪ್ರದರ್ಶನವನ್ನು ಮೆಚ್ಚಿ ಅವರನ್ನು ಸತ್ಕರಿಸಲಾಯಿತು.

ವೇದಿಕೆಯಲ್ಲಿ ಬಂಟರ ಸಂಘದ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಆರ್‌. ಕೆ. ಶೆಟ್ಟಿ, ಉಪಾಧ್ಯಕ್ಷರಾದ ಆರ್‌. ಜಿ. ಶೆಟ್ಟಿ, ಸಂಚಾಲಕರಾದ ಡಿ. ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ರವಿ ಶೆಟ್ಟಿ, ಜೊತೆ ಕಾರ್ಯದರ್ಶಿ ರಮೇಶ್‌ ರೈ, ಕೋಶಾಧಿಕಾರಿ ಕರುಣಾಕರ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಸಾದ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ವನಿತಾ ನೋಂಡಾ, ಸಂಚಾಲಕರಾದ ಸುಜಾತಾ  ಗುಣಪಾಲ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸವಿತಾ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರವೀಣ್‌ ಭೋಜ ಶೆಟ್ಟಿ ಅವರನ್ನು ಬಂಟರ ಸಂಘದ ಪರವಾಗಿ ಗೌರವಿಸಲಾಯಿತು. 

ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು.
ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ಅಪ್ಪಣ್ಣ ಎಂ. ಶೆಟ್ಟಿ, ಭಾಸ್ಕರ ಶೆಟ್ಟಿ ಕಾರ್ನಾಡ್‌, ಪ್ರಭಾಕರ ಶೆಟ್ಟಿ ನಾನಯರ ಗರಡಿ, ಪ್ರಕಾಶ್‌ ಆಳ್ವ, ಯಶವಂತ ಶೆಟ್ಟಿ, ಸೂರಜ್‌ ಶೆಟ್ಟಿ,  ಲಯನ್‌ ಶೋಭಾ ಶಂಕರ ಶೆಟ್ಟಿ, ವಜ್ರಾ ಪೂಂಜಾ, ಜ್ಯೋತಿ ಆರ್‌. ಜಿ. ಶೆಟ್ಟಿ, ಪ್ರಶಾಂತಿ ಶೆಟ್ಟಿ, ಉಷಾ ಶೆಟ್ಟಿ, ಸತೀಶ್‌ ಶೆಟ್ಟಿ, ಸೀತಾರಾಮ ಶೆಟ್ಟಿ, ಲಕ್ಷ್ಮಣ್‌ ಶೆಟ್ಟಿ, ಸುಜಾತಾ ಆರ್‌. ಶೆಟ್ಟಿ, ಶೋಭಾ ರೈ, ಶೈಲಾ ಶೆಟ್ಟಿ, ಸುಚಿತ್ರಾ ಶೆಟ್ಟಿ, ಚಿತ್ರಾ ವಿಶ್ವನಾಥ್‌ ಶೆಟ್ಟಿ, ಪೇತ್ರಿ, ಅನಿತಾ ಯು. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

Advertisement

ಗೌರವ ಕಾರ್ಯದರ್ಶಿ ರವಿ ಶೆಟ್ಟಿ ಅವರು ಆಟಗಾರರ ಯಾದಿಯನ್ನು ಓದಿದರು. ಡಾ| ಪೂರ್ಣಿಮಾ ಸುಧಾ ಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next