Advertisement
ಅ.20 ರಂದು ಸಾಕಿನಾಕದ ಸವಾಯಿ ಹೊಟೇಲ್ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಸೌಹಾರ್ದ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.
Related Articles
Advertisement
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ನೋಂಡಾ, ನಿಧಿ ಸಂಗ್ರಹಣ ಸಮಿತಿಯ ಕಾರ್ಯಾ ಧ್ಯಕ್ಷರಾದ ಯಶವಂತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಂಟರ ಸಂಘದ ಜತೆಕೋಶಾ ಕಾರಿ ಗುಣಪಾಲ ಶೆಟ್ಟಿ ಐಕಳ, ಜ್ಞಾನಮಂದಿರದ ಕಾರ್ಯಾಧ್ಯಕ್ಷ ರವೀಂದ್ರ ಭಂಡಾರಿ, ಬಂಟರ ಸಂಘದ ಸದಸ್ಯತ್ವ ನೋಂದಣಿಯ ಕಾರ್ಯಾಧ್ಯಕ್ಷ ಎನ್. ಸಿ. ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಶೆಟ್ಟಿ ಅವರು ಸಮಿತಿಯ ಕಾರ್ಯವನ್ನು ಶ್ಲಾಘಿಸಿದರು.
ಜೋಗೇಶ್ವರಿ-ದಹಿಸರ್ ಯುವ ವಿಭಾಗ ದವರು ಇತ್ತೀಚೆಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ಮಹಿಳಾ ವಿಭಾಗದ ಆಟಗಾರರನ್ನು, ಕ್ರೀಡಾ ವಿಭಾಗದ ಕಾರ್ಯಾ ಧ್ಯಕ್ಷರಾದ ಸೂರಜ್ ಶೆಟ್ಟಿ ಹಾಗೂ ಕೋಚ್ ಅಭಿಷೇಕ್ ಶೆಟ್ಟಿ ಇವರನ್ನು ಗೌರವಿಸಲಾುತು. ಸದಸ್ಯತ್ವ ನೋಂದಣಿಯಲ್ಲಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಬಂಗಾರದ ಪದಕವನ್ನು ಪಡೆದ ಲಕ್ಷಣ್ ಶೆಟ್ಟಿ ದಂಪತಿ, ಕುಟುಂಬದ ದತ್ತು ಸ್ವೀಕಾರ ಹಾಗೂ ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರಕಾಶ್ ಆಳ್ವ ಅವರನ್ನು ಗೌರವಿಸಲಾಯಿತು.
ಕುರ್ಲಾ-ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಆಯೋಜಿಸಿದ್ದ ಆದರ್ಶ ದಂಪತಿ ಸ್ಪರ್ಧೆಯಲ್ಲಿ ಮೋಸ್ಟ್ ಇಂಟಲೆಕುcವಲ್ ದಂಪತಿ ಪ್ರಶಸ್ತಿಗೆ ಭಾಜನರಾದ ಪೇತ್ರಿ ವಿಶ್ವನಾಥ ಶೆಟ್ಟಿ ದಂಪತಿಯನ್ನು ಸತ್ಕರಿಸಲಾಯಿತು. ಬಂಟರ ಸಂಘ ಆಯೋಜಿಸಿದ್ದ ಹೂಕಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಬಂಟರ ಸಂಘದ ಮಹಿಳಾ ವಿಭಾಗದ ಸಾಂಸ್ಕೃತಿಯ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಶಾಂತಿ ಶೆಟ್ಟಿ ಹಾಗೂ ತೃತೀಯ ಸ್ಥಾನವನ್ನು ಪಡೆದ ಭವಾನಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ರವಿ ಶೆಟ್ಟಿ ದತ್ತು ಸ್ವೀಕರಿ ಸಿದ ಕುಟುಂಬಗಳ ಹೆಸರನ್ನು ಹಾಗೂ ಸೂರಜ್ ಶೆಟ್ಟಿ ಕ್ರೀಡಾಳುಗಳ ಹೆಸರನ್ನು ವಾಚಿಸಿದರು. ಸುಚಿತ್ರಾ ಗಜೇಂದ್ರ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ
ಆರಂಭ ವಾಯಿತು. ಜತೆ ಕಾರ್ಯದರ್ಶಿ ರಮೇಶ್ ರೈ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆ ಯನ್ನು ಮಾಡಲಾಗಿತ್ತು. ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇಂತಹ ಸತ್ಕಾರ್ಯಗಳು ನಿತ್ಯ ನಿರಂತರವಾಗಿ ನಡೆಯಬೇಕು ಎನ್ನುವ ಆಲೋಚನೆಯಿಂದ ದಾನಿಗಳನ್ನು ಸಂಪರ್ಕಿಸಿ ಅವರ ನೆರವು, ಬೆಂಬಲವನ್ನು ಕೋರಿದ್ದೇವೆ. ಎಲ್ಲರೂ ಬಹಳ ಪ್ರೀತಿಯಿಂದ ಸ್ಪಂದಿಸಿದ್ದಾರೆ. ಇವರ ಜೀವನೋಪಾಯಕ್ಕೆ ಬೇಕಾಗುವ ಅಕ್ಕಿ, ಬೇಳೆ ಕಾಳುಗಳು, ದವಸ ಧಾನ್ಯ, ಎಣ್ಣೆ ಹೀಗೆ ಅಗತ್ಯ ವಸ್ತುಗಳನ್ನು ಪ್ರತಿ ತಿಂಗಳು ಅವರ ಮನೆಗೆ ಮುಟ್ಟಿಸಲಾಗುತ್ತದೆ. ದೀಪಾವಳಿಗೆ ಬಟ್ಟೆಬರೆ, ಚಾದರ, ಹೊದಿಕೆಗಳನ್ನು ಮನೆಯ ಪ್ರತಿಯೊಬ್ಬರಿಗೂ ಉಡುಗೊರೆಯಾಗಿ ಇಂದು ನೀಡಿದ್ದೇವೆ. ನಾವು ಆರಿಸಿದ 52 ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ 5 ಲಕ್ಷದ ಆರೋಗ್ಯ ವಿಮೆ, 2 ಲಕ್ಷದ ಜೀವ ವಿಮಾ ಪಾಲಿಸಿ, 2 ಲಕ್ಷದ ಅಪಘಾತ ವಿಮೆಯನ್ನು ಮಾಡಿಸಿ ಅದರ ಪ್ರೀಮಿ ಯಂನ್ನು ಸಮಿತಿಯೇ ಭರಿಸುತ್ತಿದೆ. ಅಲ್ಲದೆ ಆ ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ಯಾವುದೇ ವೆಚ್ಚವಿಲ್ಲದೆ ಮುಂಬಯಿಯ ಪ್ರತಿಷ್ಠಿತ ಮೂರು ಆಸ್ಪತ್ರೆಗಳ ಮುಖಾಂತರ ಅವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಕೂಡ ಮಾಡ ಲಾಗುತ್ತದೆ. ಇದರ ಹಿಂದೆ ಕುಟುಂಬ ದತ್ತು ಸ್ವೀಕಾರ ಸಮಿತಿಯ ಕಾರ್ಯಾಧ್ಯಕ್ಷ ರಾದ ಸತೀಶ್ ಶೆಟ್ಟಿ ಕಾರ್ಯನಿರತರಾಗಿದ್ದಾರೆ.
– ಡಾ| ಆರ್. ಕೆ. ಶೆಟ್ಟಿ, ಕಾರ್ಯಾಧ್ಯಕ್ಷರು : ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ