Advertisement

ಸರ್ಕಾರದ ಮುಂದೆ ಲವ್ ಜಿಹಾದ್ ನಿಷೇಧದ ಗುರಿ: ನಳಿನ್ ಕುಮಾರ್ ಕಟೀಲ್

01:16 PM Feb 17, 2021 | Team Udayavani |

ವಿಜಯಪುರ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಕರ್ನಾಟಕ ಮಾದಕ ವ್ಯಸನ ಮುಕ್ತ ರಾಜ್ಯವಾಗುತ್ತಿದ್ದು, ಗೋಹತ್ಯೆ ನಿಷೇಧ ಮಾಡಿದೆ. ಲವ್ ಜಿಹಾದ್ ಸರ್ಕಾರದ ಮುಂದಿರುವ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಹೇಳಿದರು.

Advertisement

ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಧಾರವಾಡ, ಬೆಳಗಾವಿ, ಕಲಬುರ್ಗಿ, ಬಳ್ಳಾರಿ ವಿಭಾಗಗಳ  16 ಜಿಲ್ಲೆಗಳ ಪ್ರಕೋಷ್ಠಗಳ ಮುಖ್ಯಸ್ಥರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಅಧಿಕಾರದಲ್ಲಿ ಕುಳಿತಿತ್ತು. ದೇಶದಲ್ಲಿ ಬಿಜೆಪಿ ನೇತೃತ್ವದ ವಾಜಪೇಯಿ, ಮೋದಿ ಅವರ ಸರ್ಕಾರಗಳ ಬಳಿಕ ಭಾರತದಲ್ಲಿ ಪರಿವರ್ತನೆ ಆರಂಭಗೊಂಡಿದ್ದು, ಕಾಂಗ್ರೆಸ್ ಶಾಸ್ವತವಾಗಿ ವಿಪಕ್ಷದಲ್ಲಿ ಕುಳಿತುಕೊಳ್ಳುವ ಭೀತಿ ಎದುರಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

12 ಕೋಟಿ ಸದಸ್ಯರನ್ನು ಹೊಂದಿರುವ ಬಿಜೆಪಿ ಜಗತ್ತಿನಲ್ಲೇ ಅತಿದೊಡ್ಡ ಸದಸ್ಯತ್ವ ಪಡೆದಿರುವ ಪಕ್ಷ ಎಂಬ ಹಿರಿಮೆ ಹೊಂದಿದೆ. ದೇಶದ ಯುವ ಸಮುದಾಯದಲ್ಲಿ ಪರಿವರ್ತನೆ ಆಶಯ ಹಾಗೂ ಬಿಜೆಪಿ ಮೇಲೆ ದೇಶದ ಜನ ಇರಿಸಿರುವ ನಿರೀಕ್ಷೆ ಈಡೇರಿಸುವಲ್ಲಿ ನಮ್ಮ ಸರ್ಕಾರಗಳು ಯಶಸ್ವಿಯಾಗಿವೆ ಎಂದರು.

ಇದನ್ನೂ ಓದಿ:  ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಗೋಕಾಕ್ ಕಿಂಗ್ ಪಿನ್ ಅಂದರ್

ದೇಶದಲ್ಲಿ ಸಾಮಾಜಿಕವಾಗಿ ಕೊನೆ ಸ್ಥರದಲ್ಲಿ ಇರುವ ವ್ಯಕ್ತಿಗೆ ಸ್ವಾಭಿಮಾನದ ಜೀವನ ಕಲ್ಪಿಸಿಕೊಡುವ ಆಶಯ ಹೊಂದಿದ್ದ ದೀನ ದಯಾಳ್ ಉಪಾದ್ಯಾಯ ಅವರ ಕನಸು ಸಾಕಾರಗೊಳ್ಳುತ್ತಿದೆ. ಬಿಜೆಪಿ ಯಾರನ್ನೋ ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮಾಡುವ ಉದ್ದೇಶಕ್ಕೆ ಜನ್ಮ ತಳೆದ ಪಕ್ಷವಲ್ಲ. ಭಾರತವನ್ನು ವಿಶ್ವ ಶ್ರೇಷ್ಠತೆಗೆ ಕೊಂಡೊಯ್ಯುವ ಗುರಿ ಸಾಧಿಸುವ ಪರಮ ಧ್ಯೇಯ ಹೊಂದಿದ ಪಕ್ಷ ಎಂದರು.

Advertisement

ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ನಮ್ಮ ಪಕ್ಷದ ಸರ್ಕಾರಗಳು ಕಾರ್ಯೋನ್ಮುಖ ಆಗಿವೆ. ಹೀಗಾಗಿ ಯಾವುದೇ ಚುನಾವಣೆಯಲ್ಲಿ ಕರೆಂಟ್ ಕಂಬ ನಿಲ್ಲಿಸಿದರೂ ಗೆಲ್ಲುತ್ತೆ ಎಂಬ ಭ್ರಮೆ ಸೃಷ್ಟಿಸಿದ್ದ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರಿಗೆ ನಡುಕ ಹುಟ್ಟಿದೆ ಎಂದು ಕುಟುಕಿದರು.

ಕಾಂಗ್ರೆಸ್ ಬಡವರ ಹೆಸರಲ್ಲಿ ಅಧಿಕಾರದ ರಾಜಕಾರಣ ಮಾಡುತ್ತ ಬಂದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡ ರೈತರ ಖಾತೆಗೆ 6 ಸಾವಿರ ರೂ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ 4 ಸಾವಿರ ರೂ. ಹಣವನ್ನು ಬಡ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಿ ಕೃಷಿಕರಿಗೆ ಸ್ವಾಭಿಮಾನದ ಬದುಕು ಕಟ್ಡಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಇದನ್ನೂ ಓದಿ:  ದೇಣಿಗೆ ಸಂಗ್ರಹ ವಿಷಯದಲ್ಲಿ ಯಾರಿಗೂ ಬಲವಂತ ಮಾಡುತ್ತಿಲ್ಲ: ಸಿಎಂ ಬಿಎಸ್ ವೈ

Advertisement

Udayavani is now on Telegram. Click here to join our channel and stay updated with the latest news.

Next