ಶ್ರೀನಗರ: ಪ್ರತ್ಯೇಕವಾದಿ ನಾಯಕ ದಿ| ಸಯ್ಯದ್ ಅಲಿ ಶಾ ಗಿಲಾನಿಯ ಮನೆ ಸೇರಿದಂತೆ 100 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ಆಸ್ತಿಯನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ(ಎಸ್ಐಎ) ಶನಿವಾರ ಜಪ್ತಿ ಮಾಡಿದೆ.
“ಪುಲ್ವಾಮಾ, ಕುಲ್ಗಾಂ, ಬದ್ಗಾಂ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಹಲವೆಡೆ ಅಂದಾಜು 122.89 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಜಪ್ತಿ ಮಾಡಲಾದ ಆಸ್ತಿಗಳ ಪೈಕಿ ದಕ್ಷಿಣ ಬರ್ಜುಲ್ಲಾದಲ್ಲಿರುವ 199 ಚ.ಅ. ವಿಸ್ತಿರ್ಣದ 2 ಅಂತಸ್ತಿನ ಮನೆಯು ಪ್ರತ್ಯೇಕವಾದಿ ನಾಯಕ ಗಿಲಾನಿ ಹಾಗೂ ಅಹ್ಮದ್ ಅಸ್ಮಿ ಹೆಸರಲ್ಲಿದೆ. ಈ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಯಿತು,’ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಗಿಲಾನಿ ಮೃತಪಟ್ಟಿದ್ದ.