Advertisement

ಬಣ್ಣಾರಿ ಕಾರ್ಖಾನೆ-ಲಾರಿ ಮಾಲಿಕರ ಸಂಘರ್ಷ ಅಂತ್ಯ

04:23 PM Jan 25, 2021 | Team Udayavani |

ನಂಜನಗೂಡು: ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಹಾಗೂ ಲಾರಿ ಮಾಲಿಕರ ಸಂಘರ್ಷ ಕಡೆಗೂ ಸಖಾಂತ್ಯ ಕಂಡಿದೆ.

Advertisement

ತಾಲೂಕಿನ ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಹಾಗೂ ಸ್ಥಳೀಯ ಲಾರಿ ಮಾಲಿಕರ ನಡುವೆ ಕಬ್ಬು ಸಾಗಣೆ ಕುರಿತು ಜಟಾಪಟಿ ನಡೆದಿತ್ತು. ಶನಿವಾರ ಈ ಕುರಿತು ಸಭೆ ನಡೆಸಿದ ನಂಜನ ಗೂಡು ಡಿವೈಎಸ್‌ಪಿ ಗೋವಿಂದರಾಜು,
ಇಬ್ಬರ ವೈಮನಸ್ಸು ಬದಲಾಯಿಸಿ ಸಾಮರಸ್ಯ ಉಂಟುಮಾಡುವಲ್ಲಿ ಯಶಸ್ವಿ ಯಾಗಿದ್ದಾರೆ. ಕಾರ್ಖಾನೆ ಆಡಳಿತ ಮಂಡಳಿಯು ಸ್ಥಳೀಯ ಲಾರಿ ಮಾಲಿಕರನ್ನು ಕಡೆಗಣಿಸಿ ಹೊರ ಊರುಗಳ ಲಾರಿಗಳಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿರುವುದನ್ನು ಖಂಡಿಸಿ
ಸ್ಥಳೀಯ ಲಾರಿ ಮಾಲಿಕರು ಸೋಮವಾರ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.

ಪ್ರತಿಭಟನೆಗಾಗಿ ಅನುಮತಿ ಕೋರಿದ್ದರು. ಈ ನಡುವೆ ಜಾಣ್ಮೆ ಮೆರೆದ ಡಿವೈಎಸ್ಪಿ ಗೋವಿಂದರಾಜು, ತಕ್ಷಣ ತಮ್ಮ ಕಚೇರಿಯಲ್ಲೇ ಬಣ್ಣಾರಿ ಅಮ್ಮನ್‌ ಆಡಳಿತ ಮಂಡಳಿ ಹಾಗೂ ಲಾರಿ ಮಾಲಿಕರ ಸಭೆ ನಡೆಸಿದರು. ಎರಡೂ ಬಣಗಳಿದ್ದ ತಲೆದೋರಿದ್ದ
ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿ ಸಂಧಾನ ಮಾಡಿ ಕಳುಹಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ವೇಲು ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಸತೀಶ, ಲಾರಿ ಮಾಲಿಕರ ಸಂಘದ ಅಧ್ಯಕ್ಷ ವಿಶ್ವನಾಥ ಇತರರಿದ್ದರು.

ಇದನ್ನೂ ಓದಿ:ಬೆಂಕಿ ಅವಗಡದಲ್ಲಿ ಸುಟ್ಟ್ ಮೆಕ್ಕೆಜೋಳ ಪರಿಶೀಲಿಸಿದ ರೇಣುಕಾಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next