Advertisement

ಬನ್ನಂಜೆ ದೇಗುಲ ಕೆರೆ: ಹೂಳೆತ್ತುವ ಕಾಮಗಾರಿ

11:47 PM May 21, 2019 | sudhir |

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುರಾತನ ಕೆರೆಯ ಹೂಳೆತ್ತಿ ಸ್ವತ್ಛಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ 4 ದಿನಗಳಿಂದ ಕ್ರೇನ್‌ ಮತ್ತು ಮಾನವ ಶ್ರಮದಿಂದ ಹೂಳೆತ್ತಲಾಗುತ್ತಿದೆ.

Advertisement

ಕೆರೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಂದರ್ಭ ಗಣಪತಿ ಮೂರ್ತಿ, ನವರಾತ್ರಿ ಸಂದರ್ಭ ದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುತ್ತಿತ್ತು. ಮರಗಳ ಎಲೆಗಳು ಕೂಡ ಬಿದ್ದು ನೀರು ಮಲಿನಗೊಂಡು ವಾಸನೆ ಬರುತ್ತಿತ್ತು. ನೀರಿನ ಮಟ್ಟವೂ ಭಾರೀ ಕಡಿಮೆಯಾಗಿತ್ತು. ಹಾಗಾಗಿ ತುರ್ತಾಗಿ ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

“ಅಂದಾಜು 75ರಿಂದ 80 ಸಾವಿರ ರೂ.ವೆಚ್ಚದಲ್ಲಿ ಕೆಲಸ ಮಾಡಿಸುತ್ತಿದ್ದೇವೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ 30 ಲ.ರೂ. ಅನುದಾನ ಮಂಜೂರಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಬಂದುದರಿಂದ, ಅಧ್ಯಕ್ಷರ ಅವಧಿ ಮುಕ್ತಾಯವಾದುದರಿಂದ ಆ ಅನುದಾನ ಸದ್ಯ ಬಳಕೆಗೆ ಸಿಗುತ್ತಿಲ್ಲ. ಮುಂದೆ ಅದೇ ಮೊತ್ತದಲ್ಲಿ ಕೆರೆಯನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಿ ಅಭಿವೃದ್ಧಿಪಡಿಸಲಾಗುವುದು. ಈಗ ದೇವಸ್ಥಾನಕ್ಕೆ ಬರುವ ಭಕ್ತರು ಕೈಕಾಲು ಶುಚಿಗೊಳಿಸುವುದಕ್ಕೂ ನೀರಿನ ಕೊರತೆ ಉಂಟಾಗಿದೆ. ಟ್ಯಾಂಕರ್‌ ಮೂಲಕ ನೀರು ತರಿಸುತ್ತಿದ್ದೇವೆ. ಆದ್ದರಿಂದ ತುರ್ತಾಗಿ ಹೂಳೆತ್ತಬೇಕಾಯಿತು.

ಕೆರೆಯನ್ನು ಪೂರ್ಣವಾಗಿ ಸ್ವತ್ಛಗೊಳಿಸಲಾಗುವುದು. ಮುಂದೆ ಈ ಕೆರೆಯಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡುವುದಿಲ್ಲ’ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಬನ್ನಂಜೆ ತಿಳಿಸಿದ್ದಾರೆ.
9 ವರ್ಷಗಳ ಹಿಂದೆ ಈ ಕೆರೆಯ ಹೂಳೆತ್ತಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next