Advertisement

ವಿವಿಧ ಪ್ರದೇಶಗಳಲ್ಲಿ ಬಣ್ಣದೋಕುಳಿ

02:52 PM Mar 14, 2017 | |

ಹುಬ್ಬಳ್ಳಿ: ಹೋಳಿ ಹಬ್ಬದ ಎರಡನೇ ದಿನವಾದ ಸೋಮವಾರ ನಗರದ ವಿವಿಧ ಪ್ರದೇಶಗಳಲ್ಲಿ ಜನರು ಬಣ್ಣದೋಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.

Advertisement

ಇಲ್ಲಿನ ನವನಗರ, ಅಮರಗೋಳ, ಎಪಿಎಂಸಿ, ಈಶ್ವರನಗರ, ಗೋಕುಲ ರಸ್ತೆ, ಬಂಜಾರಾ ಕಾಲೋನಿ, ಗಾಂಧಿನಗರ, ನೆಹರೂನಗರ, ವಿದ್ಯಾನಗರ, ಲೋಕಪ್ಪನಹಕ್ಕಲ, ಸಿದ್ಧರಾಮೇಶ್ವರನಗರ, ಹಳೇಹುಬ್ಬಳ್ಳಿ, ಕೃಷ್ಣಾಪುರ,

ಅಯೋಧ್ಯಾನಗರ, ಗೋಪನಕೊಪ್ಪ, ನಾಗಶೆಟ್ಟಿಕೊಪ್ಪ, ಬೆಂಗೇರಿ, ಅಶೋಕನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ಜನರು ಪರಸ್ಪರ ಬಣ್ಣ ಎರಚಿ ಓಕುಳಿಯಲ್ಲಿ ಮಿಂದೆದ್ದು, ರಂಗಪಂಚಮಿ ಆಚರಿಸಿದರು. 

ವಿವಿಧೆಡೆ ಕಾಮದಹನ ಮಾಡಲಾಯಿತು. ಮಂಗಳವಾರಪೇಟೆ, ಕಲಾದಗಿ ಓಣಿ, ಬಮ್ಮಾಪುರ ಓಣಿ, ಪ್ರಥಮಶೆಟ್ಟಿ ಓಣಿ, ವೀರಾಪುರ ಓಣಿ, ಯಲ್ಲಾಪುರ ಓಣಿ, ಬ್ರಾಡವೇ ನಾರಾಯಣ ಚೌಕ್‌, ಬಂಕಾಪುರ ಚೌಕ್‌, ನೆಹರು ನಗರ ಸೇರಿದಂತೆ ಇನ್ನಿತರೆಡೆ ಪ್ರತಿಷ್ಠಾಪಿಸಲಾಗಿದ್ದ ಸರಕಾರಿ ಕಾಮಣ್ಣನನ್ನು ದಹನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next