Advertisement

ಎಸ್ಸೆಮ್ಮೆಸ್‌, ಇ-ಮೇಲ್‌ನಲ್ಲಿ ಸಿಗಲಿದೆ ಪಿಂಚಣಿ ಮಾಹಿತಿ

12:02 AM Jun 25, 2021 | Team Udayavani |

ಹೊಸದಿಲ್ಲಿ: ಪಿಂಚಣಿದಾರರ ಖಾತೆಗಳಿಗೇ ಈಗ ಪ್ರತೀ ತಿಂಗಳು ಮೊತ್ತ ಜಮೆಯಾ­ಗುತ್ತದೆ. ಅದರ ಜತೆಗೆ ಕೇಂದ್ರ ಸರಕಾರ ಮತ್ತೂಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಪಿಂಚಣಿ ವಿವರದ ಅಂಶ­ಗಳನ್ನು ನೋಂದಾಯಿತ ಮೊಬೈಲ್‌ಗೆ ಎಸ್‌ಎಂಎಸ್‌, ಇ-ಮೇಲ್‌ಗೆ ರವಾನೆ­ಯಾಗು­ವಂತೆ ಮಾಡಲಾಗಿದೆ.

Advertisement

ಈ ಬಗ್ಗೆ ಕೇಂದ್ರ ಸಿಬಂದಿ, ಸಾರ್ವಜನಿಕ ಕುಂದು­ಕೊರತೆಗಳು ಮತ್ತು ಪಿಂಚಣಿ ಸಚಿವಾಲ­ಯದ ಕೇಂದ್ರೀಕೃತ ಪಿಂಚಣಿ ನಿರ್ವಹಣ ಕೇಂದ್ರ ಅಧಿಕಾರಿಗಳ ಸಭೆಯಲ್ಲಿ ಇಂಥ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರದ “ಜೀವನ ಮಟ್ಟ ಸುಧಾ­ರಣೆ’  ನೀತಿಯ ಅನ್ವಯ ಈ ಕ್ರಮ ಕೈಗೊಳ್ಳ ಲಾಗಿದೆ.

ಪ್ರತೀ ತಿಂಗಳು ಪಿಂಚಣಿದಾರರ ಖಾತೆಗೆ ಮೊತ್ತ ಜಮೆ ಮಾಡುವ ಬ್ಯಾಂಕ್‌ಗಳಿಗೆ ಕೂಡ ಈ ಬಗ್ಗೆ ಸೂಚನೆ ನೀಡ ಲಾಗಿದೆ. ಆದಾಯ ತೆರಿಗೆ, ತುಟ್ಟಿಭತ್ಯೆ ಪರಿಹಾರ (ಡಿಯರ್‌ನೆಸ್‌ ರಿಲೀಫ್) ಸೇರಿದಂತೆ ಹಲವು ಅಂಶ­ಗಳು ಅಗತ್ಯ ವಾಗಿರುವ ಹಿನ್ನೆಲೆಯಲ್ಲಿ ಮತ್ತು ಸುಲಭ ವಾಗಿ ಮಾಹಿತಿ ಸಿಗಲಿರುವ ಹಿನ್ನೆಲೆಯಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ.

ಇ-ಮೇಲ್‌, ಎಸ್‌ಎಂಎಸ್‌ ಮೂಲಕ ಕಳುಹಿಸಲಾಗುವ  ವಿವರದಲ್ಲಿ ಅಪ್‌ಡೇಟ್‌ ಆಗುವ ಮಾಹಿತಿಯ ವಿವರಗಳು ಇರುವಂತೆ ನೋಡಿಕೊಳ್ಳಬೇಕೆಂದು ಜೂ. 22ರಂದು ಕೇಂದ್ರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next