ಮುಂಬಯಿ: ರಿಸರ್ವ್ ಬ್ಯಾಂಕ್‌ನ ವಿತ್ತ ನೀತಿ ಪ್ರಕಟನೆಗೂ ಮುನ್ನ ಪ್ರಮುಖ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು 5 ಮೂಲಾಂಶದಷ್ಟು ಏರಿಕೆ ಮಾಡಿವೆ. ದೇಶದ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಎಸ್‌ಬಿಐ ಒಂದು ವರ್ಷದ ಎಂಸಿಎಲ್‌ಆರ್ ಅನ್ನು ಶೇ. 8.45ರಿಂದ ಶೇ. 8.50ಕ್ಕೆ ಏರಿಸಿದೆ. ಐಸಿಐಸಿಐ ಬ್ಯಾಂಕ್ ಆರು ತಿಂಗಳ ಎಂಸಿಎಲ್‌ಆರ್ ಶೇ. 8.50ರಿಂದ ಶೇ. 8.60ಕ್ಕೆ ಹಾಗೂ ಒಂದು ವರ್ಷದ ಎಂಸಿಎಲ್‌ಆರ್ ಅನ್ನು ಶೇ. 8.55 ರಿಂದ ಶೇ. 8.65ಕ್ಕೆ ಏರಿಸಲಾಗಿದೆ. ಇದೇ ವೇಳೆ ಎಚ್‌ಡಿಎಫ್ಸಿ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ಇತರ ಬ್ಯಾಂಕ್‌ಗಳೂ ಎಂಸಿಎಲ್‌ಆರ್ ಏರಿಕೆ ಮಾಡಿವೆ. ಹೀಗಾಗಿ, ಗೃಹ, ವಾಹನ ಸೇರಿದಂತೆ ಎಲ್ಲ ಮಾದರಿಯ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗಲಿದೆ. ಆರ್‌ಬಿಐ ಶುಕ್ರವಾರ ತನ್ನ ದ್ವೆ„ಮಾಸಿಕ ವಿತ್ತ ನೀತಿಯನ್ನು ಪ್ರಕಟಿಸಲಿದ್ದು, ರೆಪೋ ದರ ಹೆಚ್ಚಳ ಅಥವಾ ಕಡಿಮೆ ಮಾಡುವ ನಿರೀಕ್ಷೆ ಇಲ್ಲ. ಈ ಹಿಂದಿನ ದ್ವೆ„ಮಾಸಿಕ ನೀತಿಯಲ್ಲಿ ಶೇ. 0.25ರಷ್ಟು ರೆಪೊ ದರ ಏರಿಕೆ ಮಾಡಲಾಗಿತ್ತು.