ರಬಕವಿ ಬನಹಟ್ಟಿ: ಆಧಾರ ಕಾರ್ಡ್ ಬ್ಯಾಂಕ್‌ಗೆ ಲಿಂಕ್ ಮಾಡಿಸಲು ಮತ್ತು ಅನ್ನಭಾಗ್ಯ ಯೋಜನೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತವೆ ಎಂಬ ಹಿನ್ನಲೆಯಲ್ಲಿ ಜನರು ಬ್ಯಾಂಕ್‌ಗಳಲ್ಲಿ ಸರದಿಯಲ್ಲಿ ನಿಲ್ಲುವುದರಿಂದ್ ಅವಳಿ ನಗರದಲ್ಲಿ ಸೋಮವಾರ ಎಲ್ಲ ಬ್ಯಾಂಕ್‌ಗಳು ಫುಲ್ ರಶ್ ಆಗಿದ್ದವು.
5 ಕೆಜಿ ಅಕ್ಕಿಯ ಬದಲಾಗಿ ರೂ. 170 ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ, ಎಲ್ಲ ಫಲಾನುಭವಿಗಳು ಆಧಾರ ಪಾನ್‌ಕಾರ್ಡ ಸೇರಿದಂತೆ ಇನ್ನೀತರ ದಾಖಲಾತಿಗಳನ್ನು ಬ್ಯಾಂಕ್‌ಗೆ ನೀಡಿ ಖಾತೆ ಸರಿಹೊಂದಿಸಬೇಕಾಗಿದೆ. ಅವರರವರ ಖಾತೆಗೆ ಜಮಾಮಾಡಿದ ಹಣ ಪಡೆಯುಲು ಸಹ ಜನ ಸರದಿಯಲ್ಲಿ ಗಂಟೆಗಟ್ಟಲೆ ನಿಲ್ಲುವಂತಾಯಿತು.
ಕೆಲವರ ಖಾತೆಗಳು ಶೂನ್ಯವಾಗಿದ್ದವು, ಅವುಗಳ ಅಪಡೇಟಾ ಆಗದ ಕಾರಣ ಸರ್ಕಾರ ನೀಡುವ ಪರಿಹಾರದ ಹಣ ಜಮಾ ಆಗಿರುವುದಿಲ್ಲ. ಈಗ ಅಕ್ಕಿಯ ಬದಲಾಗಿ ಹಣ ನೀಡಲು ಖಾತೆ ಚಾಲ್ತಿ ಇಡಬೇಕಾಗಿದೆ. ಅದಕ್ಕಾಗಿ ಜನರು ಬ್ಯಾಂಕ್‌ಗಳಿ ನುಗ್ಗಿ ಸರದಿಯಲ್ಲಿ ನಿಂತು ಖಾತೆ ಸರಿಮಾಡಿಸುತ್ತಿದ್ದಾರೆ.
ಬೆಳಗಿನ 8ಕ್ಕೆ ಬ್ಯಾಂಕ್ ಮುಂದೆ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಇದರಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ನಿತ್ಯದ ವಾಣಿಜ್ಯ ವ್ಯಾಪಾರಿಗಳ ಖಾತೆ ನಿರ್ವಹಣೆ ಜೊತೆಗೆ ಸರ್ಕಾರದ ಯೋಜನೆಗಳು ಫಲಾನುಗಭವಿಗಳ ಖಾತೆಗೆ ಜಮಾ ಮಾಡುವುದು ಕೂಡಾ ಅಷ್ಟೇ ಮುಖ್ಯವಾಗಿದೆ ಎನ್ನುತ್ತಿದ್ದಾರೆ.
ಸೋಮವಾರವಂತೂ ಅವಳಿ ನಗರದ ಕೆನರಾ ಬ್ಯಾಂಕ್, ಎಸ್‌ಬಿಐ, ಬ್ಯಾಂಕ್ ಆಪ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿದಂತೆ ಇನ್ನೀತರ ರಾಷ್ಟ್ರೀಕೃತ ಬ್ಯಾಂಕ್‌ಗಳು ಫುಲ್ ರಶ್ ಆಗಿದ್ದವು.