ಮಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಂಗಳೂರು ಕೆಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ (ಎಂಸಿಸಿ ಬ್ಯಾಂಕ್) ಅತ್ಯುತ್ತಮ ಪ್ರಗತಿ ಸಾಧಿ ಸಿದ್ದು, ಬ್ಯಾಂಕಿನ ಕಾರ್ಯ ವ್ಯಾಪ್ತಿಯನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಅಧ್ಯಕ್ಷ ಅನಿಲ್ ಲೋಬೊ ಹೇಳಿದರು.
ಅವರು ಬ್ಯಾಂಕಿನ 106ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2023-24ನೇ ವಿತ್ತೀಯ ವರ್ಷದಲ್ಲಿ ಶೇ.10 ಲಾಭಾಂಶ ಘೋಷಿಸಿದೆ. ಬ್ಯಾಂಕ್ 10.45 ಕೋ. ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಬ್ಯಾಂಕ್ ಠೇವಣಿಯಲ್ಲಿ ಶೇ. 10 ಪ್ರಗತಿ ಸಾಧಿ ಸಿ 635.70 ಕೋಟಿ ರೂ. ಠೇವಣಿ, ಒಟ್ಟು ಮುಂಗಡದಲ್ಲಿ ಶೇ 25.21 ಪ್ರಗತಿ ಸಾ ಧಿಸಿದ್ದು, 444.88 ಕೋಟಿ ರೂ. ಮುಂಗಡ, ದುಡಿಯುವ ಬಂಡವಾಳ ರೂ.752.95 ಕೋ. ರೂ. (ಪ್ರಗತಿ ಶೇ.10.03) ಮತ್ತು ಶೇರು ಬಂಡವಾಳ ರೂ.31.21 ಕೋ. ರೂ. (ಪ್ರಗತಿ ಶೇ 14.07) ಆಗಿದೆ. ಬ್ಯಾಂಕಿನ ಎನ್.ಪಿ.ಎ. ಪ್ರಮಾಣವು ಕಳೆದ ಆರ್ಥಿಕ ವರ್ಷದಲ್ಲಿದ್ದ ಶೇ. 1.37ರಿಂದ 1.12ಕ್ಕೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆ ಉತ್ತಮವಾಗಿದೆ ಎಂಬುದಕ್ಕೆ ಸಾಕ್ಷಿ ಎಂದರು.
ಮುಂದಿನ ವರ್ಷ 10 ಹೊಸ ಶಾಖೆಗಳ ಆರಂಭ, ಉಡುಪಿ, ಮೂಡುಬಿದಿರೆ, ಕಾರ್ಕಳ, ಮತ್ತು ಕುಲಶೇಖರ ಶಾಖೆಗಳ ಸ್ಥಳಾಂತರ, ಡಿಜಿಟಲ್ ಸೇವೆಯಂತಹ ಗೂಗಲ್ ಪೇ, ಫೋನ್ ಪೇ, ಯುಪಿಎ ಮುಂತಾದ ಸೌಲಭ್ಯಗಳನ್ನು ಸದ್ಯದಲ್ಲೇ ಒದಗಿಸಲಾಗುವುದು ಎಂದರು.
ನಿರ್ದೇಶಕ ಡೇವಿಡ್ ಡಿ’ ಸೋಜಾ, ಸದಸ್ಯರಾದ ಎಡ್ಮಂಡ್ ಫ್ರಾಂಕ್, ರೋನ್ಸ್ ಬಂಟ್ವಾಳ್, ರೋಹನ್ ಮೊಂತೇರೊ, ಪಿಯುಸ್ ಎಲ್. ರೊಡ್ರಿಗಸ್ ಮತ್ತು ಲುವಿ ಪಿಂಟೊ ಅವರು ಸಂಸ್ಥಾಪಕರಿಗೆ ಪುಷ್ಪ ನಮನ ಸಲ್ಲಿಸಿದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿ’ಸಿಲ್ವಾ ಸಭೆಯ ವರದಿ ಓದಿದರು. 2023-24ರ ಲೆಕ್ಕ ಪರಿಶೋಧಿತ ಹಣಕಾಸು, ಲೆಕ್ಕ ಪರಿಶೋಧನೆ ವರದಿ, 2024-25ರ ಆರ್ಥಿಕ ವರ್ಷದ ಚಟುವಟಿಕೆಗಳ ಕಾರ್ಯ ಕ್ರಮ ಮತ್ತು 2024-25ರ ಬಜೆಟ್ ಅನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು.
ನಿರ್ದೇಶಕರಾದ ಅಂಡ್ರೂ ಡಿ’ ಸೋಜಾ, ಜೋಸೆಫ್ ಎಂ., ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಡೇವಿಡ್ ಡಿ’ಸೋಜಾ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜಾ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿ’ ಸೋಜಾ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.
ಜಿಎಂ ಸುನಿಲ್ ಮಿನೇಜಸ್ ಸ್ವಾಗ ತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾ ಪಕ ಒವಿನ್ ರೆಬೆಲ್ಲೊ ನಿರೂಪಿಸಿದರು. ಅಧ್ಯಕ್ಷ ಅನಿಲ್ ವಂದಿಸಿದರು.